ಕ್ಷಯರೋಗ ನಿಯಂತ್ರಣ ಜಾಗೃತಿ: ಇಂದು ಬೀದಿನಾಟಕ
0
ಡಿಸೆಂಬರ್ 26, 2018
ಕಾಸರಗೋಡು: ಕ್ಷಯರೋಗ ನಿಯಂತ್ರಣ ಜಾಗೃತಿ ಸಂಬಂಧ ಬೀದಿನಾಟಕ ಪ್ರದರ್ಶನ ಇಂದು (ಡಿ.27) ಬೆಳಿಗ್ಗೆ 10 ಗಂಟೆಗೆ ಕಾಸರಗೋಡು ಹೊಸಬಸ್ ನಿಲ್ದಾಣ ಆವರಣದಲ್ಲಿ ಜರುಗಲಿದೆ.
ಕ್ಷಯರೋಗ ನಿಯಂತ್ರಣ ಜಿಲ್ಲಾ ಸಮಿತಿ ವತಿಯಿಂದ ಈ ಜಾಗೃತಿ ನಾಟಕ ಆಯೋಜಿಸಲಾಗಿದೆ. ಶಾಸಕ ಎನ್.ಎ.ನೆಲ್ಲಿಕುನ್ನು ನಾಟಕ ಪ್ರದರ್ಶನವನ್ನು ಉದ್ಘಾಟಿಸುವರು. ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಟಿ.ಪಿ.ಆಮಿನಾ ಅಧ್ಯಕ್ಷತೆ ವಹಿಸುವರು.
ಹೊಸ ಬಸ್ ನಿಲ್ದಾಣ ಆವರಣದ ಪ್ರದರ್ಶನದ ಬಳಿಕ ಪಾಲಕುನ್ನು, ಕಾಞÂಂಗಾಡ್,ನೀಲೇಶ್ವರ, ಚೆರುವತ್ತೂರು, ತ್ರಿಕರಿಪುರ ಮೊದಲಾದೆಡೆ ಈ ಜನಜಾಗೃತಿ ನಾಟಕ ನಡೆಯಲಿದೆ.


