ಸ್ಮೈಲ್ ರಾಯಭಾರಿಗಳ ತ್ರಿದಿನ ಪ್ರವಾಸ ಕಾರ್ಯಕ್ರಮ ಉತ್ತರ ಮಲಬಾರಿನಲ್ಲಿ ಪ್ರವಾಸೋದ್ಯಮ ಅವಕಾಶ ವಿಪುಲವಾಗಿವೆ- ಸಂಸದ ಪಿ.ಕರುಣಾಕರನ್
0
ಡಿಸೆಂಬರ್ 08, 2018
ಕಾಸರಗೋಡು: ಉತ್ತರ ಮಲಬಾರು ಪ್ರಾಂತ್ಯದಲ್ಲಿ ಪ್ರವಾಸಿ ವಿನೋದ ಸಂಚಾರ ಕೇಂದ್ರಗಳು ಸಾಕಷ್ಟಿದ್ದು, ಪ್ರವಾಸೋದ್ಯಮದ ವಿಪುಲತೆಗೆ ಕಾರಣವಾಗಿದೆ ಎಂದು ಸಂಸದ ಪಿ.ಕರುಣಾಕರನ್ ಹೇಳಿದರು.
ಬೇಕಲ ರೆಸಾರ್ಟ್ ಅಭಿವೃದ್ಧಿ ನಿಗಮದ ಹಮ್ಮಿಕೊಂಡ ಸ್ಮೈಲ್(ಸಣ್ಣ ಮತ್ತು ಮಧ್ಯಮ ಗುಡಿ ಕೈಗಾರಿಕೆ ಸಾಮಥ್ರ್ಯದ ಮೂಲಕ ಅನುಭವ ಪ್ರವಾಸ) ರಾಯಭಾರಿಗಳ ತ್ರಿದಿನ ಪ್ರವಾಸ ಕಾರ್ಯಕ್ರಮವನ್ನು ಕಾಞಂಗಾಡಿನ ಪಡನ್ನಕ್ಕಾಡು ಬೇಕಲ ಕ್ಲಬ್‍ನಲ್ಲಿ ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.
ಉತ್ತರ ಮಲಬಾರಿನ ಕಾಸರಗೋಡು, ಕಣ್ಣೂರು, ಕಲ್ಲಿಕೋಟೆ ಮತ್ತು ವಯನಾಡು ಜಿಲ್ಲೆಗಳಲ್ಲಿನ ಬೌಗೋಳಿಕ ಸೌಂದರ್ಯ, ವಿವಿಧ ಪ್ರವಾಸಿ ತಾಣಗಳು ಮತ್ತು ವಿನೂತನ ಸಂಸ್ಕøತಿಯ ಪರಿಚಯವು ಎಲ್ಲ ಪ್ರವಾಸಿಗರಿಗೆ ಆಸ್ವಾದಿಸಲು ಸಾಧ್ಯವಾಗಬೇಕಿದೆ ಎಂದರು. ಪ್ರವಾಸೋದ್ಯಮ ಅಭಿವೃದ್ಧಿಯಿಂದ ವಿಶ್ವ ಭೂಪಟದಲ್ಲಿ ಉತ್ತರ ಮಲಬಾರಿನ ಪ್ರೇಕ್ಷಣೀಯ ಸ್ಥಳಗಳು ಸ್ಥಾನ ಪಡೆಯಲಿವೆ ಎಂದು ಸಂಸದರು ಅಭಿಪ್ರಾಯ ವ್ಯಕ್ತಪಡಿಸಿದರು.
ರಾಜ್ಯದ ಪ್ರಮುಖ ಪ್ರವಾಸ ಆಯೋಜಕರು, 50 ಸ್ಮೈಲ್ ಘಟಕಗಳ 90 ಮಂದಿ ಉದ್ಯಮಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಉದ್ಯಮಿಗಳ ಸಭೆ, ಪ್ರವಾಸೋದ್ಯಮ ಅವಕಾಶಗಳ ಬಗ್ಗೆ ವಿಚಾರಗೋಷ್ಠಿ ನಡೆಯಿತು. ಪ್ರವಾಸಿ ಸಾಧ್ಯತೆಗಳನ್ನು ಗಮನದಲ್ಲಿರಿಸಿಕೊಂಡು ನೂತನ ಮತ್ತು ಪ್ರತಿಷ್ಠೆಯ ಸಂಕೇತವಾಗಿ ಸ್ಮೈಲ್ ಅಂಬಾಸಿಡರ್ ಟೂರ್ ಆಯೋಜಿಸಲಾಗಿದೆ. ಅಸೋಸಿಯೇಶನ್ ಆಫ್ ಟ್ರೇಡ್ ಅರ್ಗನೈಸೇಶನ್ ಆಫ್ ಇಂಡಿಯಾದ ಸಹಕಾರದೊಂದಿಗೆ ಮೂರು ದಿನಗಳ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಬಿಆರ್‍ಡಿಸಿ ಪ್ರಬಂಧಕ ಟಿ.ಕೆ ಮನ್ಸೂರ್ ಹೇಳಿದರು. ಸ್ವಾಗತ ಭಾಷಣ ಮಾಡಿದ ಅವರು ಅನುಭವಿ ಪ್ರವಾಸದ ಲಕ್ಷ್ಯವನ್ನು ಗಮನದಲ್ಲಿರಿಸಿಕೊಂಡು ಬಿಆರ್‍ಡಿಸಿ ಸಂಸ್ಥೆಯು ಕಾರ್ಯಕ್ರಮವನ್ನು ಆಯೋಜಿಸಿದೆ, ಗುರುವಾರದಂದು ಕಾಸರಗೋಡಿನ ಬಹುಭಾಷಾ ಸಂಸ್ಕøತಿಯ ಅನಾವರಣವಾಗಿದೆ. ಬೇಕಲ ಸಮುದ್ರ ಕಿನಾರೆಯಲ್ಲಿ ಉತ್ತರ ಕೇರಳದ ಕಳರಿಪಯಟ್ಟು ಅಭ್ಯಾಸ ಶಿಬಿರ, ಗಾಳಿಪಟ ಹಾರಾಟ, ಮರಳು ಶಿಲ್ಪ ರಚನೆ, ಸೈಕಲ್ ಪ್ರವಾಸದಂತಹ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದರು. ಅಟೋಯ್ ಅಧ್ಯಕ್ಷ ಸಿ.ಎಸ್.ವಿನೋದ್ ಧನ್ಯವಾದಗೈದರು. ಈ ಸಂದರ್ಭ ವಿವಿಧ ಸಾಂಪ್ರದಾಯಿಕ ಕಲೆಗಳನ್ನು ಪರಿಚಯಿಸಲಾಯಿತು. ಸುರಂಗ, ಗ್ರಾಮೀಣ ಕೃಷಿ ತೋಟ, ಬುಡಕಟ್ಟು ಗ್ರಾಮಗಳ ಸಂದರ್ಶನ ಮೂರು ದಿನಗಳ ರಾಯಭಾರಿಗಳ ಪ್ರವಾಸದಲ್ಲಿ ನಡೆಯಲಿದೆ. ಅಲಾಮಿಕಳಿ, ಮಂಗಲಂ ಕಳಿ, ಭೂತಾರಾಧನೆ ಮೊದಲಾದವನ್ನು ರಾಯಭಾರಿಗಳು ವೀಕ್ಷಿಸಲಿದ್ದಾರೆ.
ಶುಕ್ರವಾರ ಕಣ್ಣೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ವೀಕ್ಷಿಸಲು ಆಗಮಿಸಿದ ಉನ್ನತ ಅಧಿಕಾರಿಗಳ ತಂಡ ಉತ್ತರ ಮಲಬಾರಿನ ಪ್ರವಾಸೋದ್ಯಮ ಸಾಧ್ಯತೆಗಳ ಬಗ್ಗೆ ನಾರ್ತ್ ಮಲಬಾರ್ ಚೇಂಬರ್ ಆಫ್ ಕಾಮರ್ಸ್ ಪ್ರತಿನಿಧಿಗಳ ಜೊತೆ ಚರ್ಚಿಸಿದರು.





