ವಿದ್ಯುಕ್ತವಾಗಿ ಚಾಲನೆಗೊಂಡ ರಾಜ್ಯ ಕಲೋತ್ಸವ
0
ಡಿಸೆಂಬರ್ 08, 2018
ಕಾಸರಗೋಡು: ಭೀಕರ ಪ್ರಳಯ ಹಾಗೂ ಶಬರಿಮಲೆ ವಿವಾದಗಳ ಸುಳಿಯ ಮಧ್ಯೆ ರಾಜ್ಯದ 59ನೇ ಶಾಲಾ ಕಲೋತ್ಸವ ಶುಕ್ರವಾರ ಆಲಪ್ಪುಳದಲ್ಲಿ ಅಧಿಕೃತ ಚಾಲನೆ ನೀಡಲಾಯಿತು. ಪ್ರಳಯ ದುರಂತದ ಹಿನ್ನೆಲೆಯಲ್ಲಿ ಈ ವರ್ಷ ರಾಜ್ಯ ಮಟ್ಟದ ಕಲೋತ್ಸವವನ್ನು ಮೂರು ದಿನಗಳಿಗೆ ಸೀಮಿತಗೊಳಿಸಲಾಗಿದೆ.
ಶುಕ್ರವಾರ ಆರಂಭಗೊಂಡ ರಾಜ್ಯ ಕಲೋತ್ಸವವನ್ನು ರಾಜ್ಯ ಸಾರ್ವಜನಿಕ ವಿದ್ಯಾಭ್ಯಾಸ ನಿರ್ದೇಶಕ ಕೆ.ವಿ.ಮೋಹನ್ ಕುಮಾರ್ ಧ್ವಜಾರೋಹಣಗೊಳಿಸಿ ಚಾಲನೆ ನಿಡಿದರು. ಇದೇ ವೇಳೆ 59 ವಿದ್ಯಾರ್ಥಿಗಳು ಮಣ್ಣಿನ ದೀಪಗಳನ್ನು ಬೆಳಗಿಸಿ ಉದ್ಘಾಟಿಸಿದ್ದು ವಿಶೇಷವಾಗಿತ್ತು. ಶುಕ್ರವಾರ 29 ವೇದಿಕೆಗಳಲ್ಲಿ ಪ್ರಮುಖ 62 ವಿಷಯಗಳ ಸ್ಪರ್ಧೆಗಳು ನಡೆದವು. ಮಿಕ್ಕುಳಿದಂತೆ ಇಂದು ಹಾಗೂ ನಾಳೆ 30 ವೇದಿಕೆಗಳಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಆಗಮಿಸಿದ ವಿದ್ಯಾರ್ಥಿಗಳು ತಮ್ಮ ಪ್ರತಿಭಾ ಅನಾವರಣದ ಮೂಲಕ ಸ್ಪರ್ಧಿಸುವರು.





