ಪಟ್ಲ ಫೌಂಡೇಶನ್ ಯಕ್ಷ ಗಾಯನ ವೈಭವ ಮಾಹಿತಿ ಪತ್ರಿಕೆ ಬಿಡುಗಡೆ
0
ಡಿಸೆಂಬರ್ 27, 2018
ಕುಂಬಳೆ: ಯಕ್ಷದ್ರುವ ಪಟ್ಲ ಫೌಂಡೇಶನ್ ಕುಂಬಳೆ ಘಟಕದ ನೇತೃತ್ವದಲ್ಲಿ ಕುಂಬಳೆ ಕಣಿಪುರ ಶ್ರೀಗೋಪಾಲಕೃಷ್ಣ ಕ್ಷೇತ್ರದಲ್ಲಿ ಜನವರಿಯಲ್ಲಿ ನಡೆಯಲಿರುವ ವಾರ್ಷಿಕ ಜಾತ್ರೋತ್ಸವದ ವೇಳೆ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಲಲಿದ್ದು, ಅದರ ಆಮಂತ್ರಣ ಪತ್ರಿಕೆಯನ್ನು ಇತ್ತೀಚೆಗೆ ಘಟಕದ ಅಧ್ಯಕ್ಷರಾದ ಎಸ್.ಜಗನ್ನಾಥ ಶೆಟ್ಟಿ ಅವರ ಸ್ವಗೃಹದಲ್ಲಿ ಬಿಡುಗಡೆಗೊಳಿಸಲಾಯಿತು.
ಕಾರ್ಯಕ್ರಮದಲ್ಲಿ ಎಸ್.ಜಗನ್ನಾಥ ಶೆಟ್ಟಿ, ಪ್ರದೀಪ್ ಉಚ್ಚಿಲ್, ಕೋಳಾರು ಸತೀಶ್ಚಂದ್ರ ಭಂಡಾರಿ, ರಾಘವೇಂದ್ರ ಪ್ರಸಾದ್ ಬದಿಯಡ್ಕ, ವೇಣುಗೋಪಾಲ ಶೆಟ್ಟಿ ಕಿನ್ನಿಮಜಲು, ಪೃಥ್ವಿರಾಜ್ ಶೆಟ್ಟಿ, ಗಂಗಾಧರ ಕಿಲ್ಲೆ, ಚಿ.ಸಾಯಿರಾಜ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಜ. 18 ರಂದು ಶುಕ್ರವಾರ ಕಣಿಪುರ ಕ್ಷೇತ್ರ ಜಾತ್ರೆಯ ಆರಾಟು ಮಹೋತ್ಸವದಮದು ಸಂಜೆ 4.30 ರಿಂದ ಯಕ್ಷಗಾಯನ ವೈಭವ ಆಯೋಜಿಸಲಾಗಿದ್ದು, ತೆಂಕು-ಬಡಗಿನ ಅಗ್ರಮಾನ್ಯ ಕಲಾವಿದರು ಭಾಗವಹಿಸುವರು.





