HEALTH TIPS

ಜಮ್ಮು ಕಾಶ್ಮೀರ: ಶ್ರೀನಗರ ಹೊರವಲಯದಲ್ಲಿ ಉಗ್ರರು-ಸೇನಾಪಡೆ ನಡುವೆ ಎನ್ ಕೌಂಟರ್ ಪ್ರಾರಂಭ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಬೇಸಿಗೆಯ ರಾಜಧಾನಿ ಶ್ರೀನಗರ ಹೊರವಲಯದಲ್ಲಿ ಉಗ್ರಗಾಮಿಗಳು ಹಾಗೂ ಸೇನಾ ಪಡೆಗಳ ನಡುವೆ ಶನಿವಾರ ಎನ್ ಕೌಂಟರ್ ಪ್ರಾರಂಭವಾಗಿರುವುದಾಗಿ ಪೋಲೀಸರು ಹೇಳಿದ್ದಾರೆ. ನಗರದ ಹೊರವಲಯದಲ್ಲಿರುವ ಶ್ರೀನಗರ-ಬಂಡೀಪೂರ ರಸ್ತೆಯ ಮುಜಗುಂದ್ ಪ್ರದೇಶದಲ್ಲಿ ಇಂದು ಸಂಜೆ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆ ಪ್ರಾರಂಭಿಸಿದೆ. ಈ ವೇಳೆ ಉಗ್ರಗಾಮ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಇದಕ್ಕೆ ಪ್ರತಿಯಾಗಿ ಸೇನಾಪಡೆಯು ಎನ್ ಕೌಂಟರ್ ನಡೆಸಿದೆ ಎಂದು ಅವರು ಮಾಹಿತಿ ನೀಡಿದ್ದಾರೆ .ಗುಂಡಿನ ಚಕಮಕಿ ಮುಂದುವರಿದಿದ್ದು ಮತ್ತಷ್ಟು ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries