ನಾಸಾ ಲ್ಯಾಂಡಾರ್ ನಿಂದ ಮಂಗಳನ ಮೇಲಿನ ಮೊದಲ ಶಬ್ದ ದಾಖಲು:
0
ಡಿಸೆಂಬರ್ 08, 2018
ವಾಶಿಂಗ್ಟನ್: ಮಂಗಳ ಗ್ರಹದ ಮೇಲಿನ ಶಬ್ದವನ್ನು ದಾಖಲಿಸಿದ್ದು, ಕೆಂಪು ಗ್ರಹದ ಮೇಲಿನ ಶಬ್ದ ಹೇಗಿರಲಿದೆ ಎಂಬುದನ್ನು ಕೇಳಬಹುದಾಗಿದೆ. "ಮಂಗಳ ಗ್ರಹದಲ್ಲಿರುವ ನಾಸಾದ ಇನ್ ಸೈಟ್ ಲ್ಯಾಂಡರ್ ಅಲ್ಲಿ ಬೀಸುವ ತಂಗಾಳಿಯ ಕಂಪನಗಳನ್ನು ದಾಖಲಿಸಿದೆ" ಎಂದು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ಹೇಳಿದೆ. ಮಂಗಳ ಗ್ರಹದ ಮೇಲಿನ ಗಾಳಿ 10-15 ಎಂಪಿಹೆಚ್ ( ಪ್ರತಿ ಸೆಕೆಂಡ್ ಗೆ 5-7 ಮೀಟರ್ಸ್) ನಲ್ಲಿ ಬೀಸುತ್ತಿರುವುದನ್ನು ನಾಸಾ ಲ್ಯಾಂಡರ್ ಸೆರೆ ಹಿಡಿದಿದೆ.
ಇದೇ ಮೊದಲ ಬಾರಿಗೆ ಸೀಸ್ಮಾಮೀಟರ್ ನಲ್ಲಿ15 ನಿಮಿಷಗಳ ಡಾಟಾ ಬಹಿರಂಗವಾಗಿದ್ದು, ಗಾಳಿಯಲ್ಲಿ ಧ್ವಜ ಹಾರಿದಾಗ ಕೇಳಿಸುವ ರೀತಿಯಲ್ಲಿ ಮಂಗಳ ಗ್ರಹದ ಶಬ್ದ ಕೇಳಿಬಂದಿದೆ . ಇನ್ ಸೈಟ್ ನ್ನು ಮಂಗಳ ಗ್ರಹವನ್ನು ಹಿಂದಿಗಿಂತಲೂ ಭಿನ್ನವಾಗಿ ಆಂತರಿಕವಾಗಿ ಅಧ್ಯಯನ ನಡೆಸುವ ರೀತಿಯಲ್ಲಿ ಅಭಿವೃದ್ಧಿಪಡಿಸಲಾಗಿದೆ ಎಂದು ನಾಸಾ ವಿಜ್ಞಾನಿಗಳು ತಿಳಿಸಿದ್ದಾರೆ.





