ಸ್ಟೇಟ್ ಬಾರ್ಬರ್ ಬ್ಯೂಟೀಷ್ಯನ್ ಅಸೋಸಿಯೇಶನ್ ತಾಲೂಕು ಸಮ್ಮೇಳ
0
ಡಿಸೆಂಬರ್ 08, 2018
ಬದಿಯಡ್ಕ: ಕೇರಳ ಸ್ಟೇಟ್ ಬಾರ್ಬರ್ ಬ್ಯೂಟೀಷ್ಯನ್ ಅಸೋಸಿಯೇಶನ್ 50ನೇ ವಾರ್ಷಿಕ ಕಾಸರಗೋಡು ತಾಲೂಕು ಸಮ್ಮೇಳನವು ಬದಿಯಡ್ಕ ಗ್ರಾಂಡ್ ಓಡಿಟೋರಿಯಂನಲ್ಲಿ ಶುಕ್ರವಾರ ನಡೆಯಿತು.
ಕೆ.ಎಸ್.ಬಿ.ಎ. ತಾಲೂಕು ಅಧ್ಯಕ್ಷ ಎಂ. ಗೋಪಿ ಧ್ವಜಾರೋಹಣಗೈದರು. ನಂತರ ನಡೆದ ಸಭಾ ಕಾರ್ಯಕ್ರಮವನ್ನು ಕೆ.ಎಸ್.ಬಿ.ಎ. ರಾಜ್ಯ ಉಪಾಧ್ಯಕ್ಷ ಎಂ.ಪಿ. ನಾರಾಯಣನ್ ಉದ್ಘಾಟಿಸಿದರು. ಕೆ.ಎಸ್.ಬಿ.ಎ. ಜಿಲ್ಲಾ ಅಧ್ಯಕ್ಷ ಎನ್.ಸೇತು, ಜಿಲ್ಲಾ ಕಾರ್ಯದರ್ಶಿ ಎಂ.ಪಿ.ಕುಮಾರನ್, ಜಿಲ್ಲಾ ಕೋಶಾಧಿಕಾರಿ ಆರ್. ಗೋವಿಂದರಾಜ್, ತಾಲೂಕು ಕೋಶಾಧಿಕಾರಿ ಬಿ.ರಾಜ, ರಾಜ್ಯಸಮಿತಿ ಸದಸ್ಯ ಆರ್. ನಟರಾಜನ್, ಜಿಲ್ಲಾ ಉಪಾಧ್ಯಕ್ಷ ಎನ್.ಆರ್.ಕೃಷ್ಣನ್ ಶುಭಾಶಂಸನೆಗೈದರು. ತಾಲೂಕು ಕಾರ್ಯದರ್ಶಿ ಎಂ.ಪಿ.ಕುಮಾರನ್ ಸ್ವಾಗತಿಸಿ ವರದಿ ಮಂಡಿಸಿದರು. ಬದಿಯಡ್ಕ ಬ್ಲಾಕ್ ಅಧ್ಯಕ್ಷ ಬಿ.ಸತ್ಯನಾರಾಯಣ ವಂದಿಸಿದರು. ಸಮ್ಮೇಳನದ ಅಂಗವಾಗಿ ಬದಿಯಡ್ಕ ಪೇಟೆಯಲ್ಲಿ ಆಕರ್ಷಕ ಮೆರವಣಿಗೆಯನ್ನು ನಡೆಸಲಾಯಿತು.






