ಅಮ್ಮಂಗೋಡು- ಕೊಳ್ಳಿ ಕಡಿಯುವ ಮುಹೂರ್ತ
0
ಡಿಸೆಂಬರ್ 11, 2018
ಮುಳ್ಳೇರಿಯ: ಮುಳಿಯಾರಿನ ಅಮ್ಮಂಗೋಡು ಶ್ರೀ ಮಹಾವಿಷ್ಣು ದೈವಸ್ಥಾನದಲ್ಲಿ ಎಪ್ರಿಲ್ 18 ರಿಂದ 20 ರ ವರೆಗೆ ನಡೆಯಲಿರುವ ಒತ್ತೆಕೋಲ ಮಹೋತ್ಸವದ ಪೂರ್ವಭಾವಿಯಾಗಿ ' ಕೊಳ್ಳಿ ಕಡಿಯುವ ಮುಹೂರ್ತ ' ಇತ್ತೀಚೆಗೆ ಯಶಸ್ವಿಯಾಗಿ ಸಂಪನ್ನವಾಯಿತು. ಕಾರ್ಯಕ್ರಮದಂಗವಾಗಿ ಶ್ರೀ ಕ್ಷೇತ್ರದಿಂದ ವಾದ್ಯಘೋಷಗಳೊಂದಿಗೆ ಮೆರವಣಿಗೆಯು ಜರಗಿತು. ಕಾರ್ಯಕ್ರಮದಲ್ಲಿ ಸೇವಾಸಮಿತಿಯ ಹಾಗೂ ಮಾತೃ ಸಮಿತಿಯ ಪದಾಧಿಕಾರಿಗಳು, ಸದಸ್ಯರು ಮತ್ತು ಭಕ್ತ ಮಹಾಜನರು ಭಾಗವಹಿಸಿ ಮೆರವಣಿಗೆಯನ್ನು ಚಂದಗಾಣಿಸಿದರು.





