ಅಗಲ್ಪಾಡಿಗೆ ಆರ್ಥಿಕ ತಜ್ಞರ ಭೇಟಿ
0
ಡಿಸೆಂಬರ್ 09, 2018
ಬದಿಯಡ್ಕ: ಚೆನ್ನೈಯ ಖ್ಯಾತ ಲೆಕ್ಕಪರಿಶೋಧಕ, ಆರ್ಥಿಕ ತಜ್ಞ ಶಿವರಾಮನ್ ಹಾಗೂ ಚಂದ್ರನ್ ದಂಪತಿಗಳು ಶುಕ್ರವಾರ ಅಗಲ್ಪಾಡಿ ಶ್ರೀದುರ್ಗಾಪರಮೇಶ್ವರಿ ಕ್ಷೇತ್ರಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.
ಅಗಲ್ಪಾಡಿ ಶ್ರೀಕ್ಷೇತ್ರದ ಆಡಳಿತ ಮೊಕ್ತೇಸರ ವಾಸುದೇವ ಭಟ್ ಶಿವರಾಮನ್ ಹಾಗೂ ಚಂದ್ರನ್ ದಂಪತಿಗಳನ್ನು ಶಾಲುಹೊದೆಸಿ ಗೌರವಿಸಿದರು. ಕ್ಷೇತ್ರದ ವಿಶ್ವಸ್ತರಾದ ಎ.ಜಿ.ಶರ್ಮಾ ಕೋಳಿಕ್ಕಜೆ,ನಾಗರಾಜ ಉಪ್ಪಂಗಳ, ರಾಮ ಭಟ್ ಮವ್ವಾರು, ಬಾಲಗೋಪಾಲ ಶರ್ಮಾ, ಮಾಧವ ಭಟ್ ಕೊಟ್ಟಂಗುಳಿ, ಪುರೋಹಿತ ವಿಘ್ನೇಶ್ ಡಿ ಸಹಿತ ಇತರರು ಉಪಸ್ಥಿತರಿದ್ದರು.





