ಗುಂಪೆಯಲ್ಲಿ ಸಂಪನ್ನಗೊಂಡ ಸೇವಾ ಅಘ್ರ್ಯ-
0
ಡಿಸೆಂಬರ್ 10, 2018
ಕುಂಬಳೆ: ಪೆರ್ಲ ಸಮೀಪದ ಅಮೃತಧಾರಾ ಗೋಶಾಲೆಗೆ ಮೇವಿನ ಹುಲ್ಲನ್ನು ಕತ್ತರಿಸಿ ತಲಪಿಸುವ ಸೇವಾಅಘ್ರ್ಯ-ಗೋವಿಗಾಗಿ ಮೇವು ಭಾನುವಾರ ಯಶಸ್ವಿಯಾಗಿ ನೆರವೇರಿತು.
ನಿನ್ನೆ ಬೆಳಿಗ್ಗೆ 7.ಕ್ಕೆ ಗುಂಪೆಗುಡ್ಡೆಯ ಶ್ರೀ ಶಂಕರ ಧ್ಯಾನಮಂದಿರ ಪರಿಸರದಲ್ಲಿ ಮುಳಿಹುಲ್ಲು ಕತ್ತರಿಸಲು ವಿದ್ಯುಕ್ತ ಚಾಲನೆ ನೀಡಲಾಯಿತು. ಗುಂಪೆ ವಲಯದ ಅಧ್ಯಕ್ಷ ಅಮ್ಮಂಕಲ್ಲು ರಾಮಭಟ್ಟರು ಗೋಮಾತೆಗೆ ಗೋಗ್ರಾಸ ನೀಡುವಮೂಲಕ ಚಾಲನೆ ನೀಡಿದರು.ಕಾಮದುಘಾ ಕಾರ್ಯದರ್ಶಿ ಡಾ.ವೈ.ವಿ.ಕೃಷ್ಣಮೂರ್ತಿ ಧ್ಜಜರೋಹಣಗೈದರು. ಗುರುವಂದನೆ,ಗೋಸ್ತುತಿಯಂದಿಗೆ ಆರಂಭವಾಯಿತು.ಮಂಡಲದ ವಿದ್ಯಾರ್ಥಿವಾಹಿನೀ ಪ್ರಧಾನ ಕೇಶವಪ್ರಸಾದ ಎಡಕ್ಕಾನ, ವಲಯದ ಕಾರ್ಯದರ್ಶಿ ಬಜಪ್ಪೆ ಸುಬ್ರಹ್ಮಣ್ಯ ಭಟ್ಟ ಮತ್ತಿತರು ಉಪಸ್ಥಿತರಿದ್ದರು.
ಮಹಾಮಂಡಲದ ಶಿಷ್ಯಮಾಧ್ಯಮಪ್ರಧಾನ ಬಳ್ಳಮೂಲೆ ಗೋವಿಂದ ಭಟ್,ಶಾಮ ಭಟ್ ಬೇರ್ಕಡವು, ಮುಳ್ಳೇರಿಯಾ ಮಂಡಲದ ಕಾರ್ಯದರ್ಶಿ ಬಾಲಸುಬ್ರಹ್ಮಣ್ಯ ಭಟ್ ಸರ್ಪಮಲೆ,ನವನೀತ ಪನೆಯಾಲ,ವೈ.ಕೆ.ಗೋವಿಂದ ಭಟ್, ಬಾಲಸುಬ್ರಹ್ಮಣ್ಯ ಭಟ್ ಪರಪ್ಪೆ,ಗೀತಾಲಕ್ಷ್ಮೀ,ಸುಬ್ರಹ್ಮಣ್ಯ ಭಟ್ ಗಬ್ಬಲಡ್ಕ ಸಹಿತ ವಿವಿಧ ವಲಯದ ಪದಾಧಿಕಾರಿಗಳು, ಗೋಪ್ರೇಮಿಗಳು ಭಾಗವಹಿಸಿದ್ದರು.10 ಟಾವು ಯಂತ್ರ,10 ವಿದ್ಯಾರ್ಥಿಗಳ ಸಹಿತ 115 ಗೋಕಿಂಕರರಯ ಭಾಗವಹಿಸಿದ್ದರು.
ಬಟಾ ಬಯಲಾಗಿರುವ ಗುಂಪೆ ಬೆಟ್ಟದಲ್ಲಿ ನೆತ್ತಿಯಮೇಲೆ ಸೂರ್ಯನಿದ್ದರೂ ಕತ್ತಿಯನ್ನು ಕೆಳಗಿಡದೆ ಉತ್ಸಾಹದಿಂದ ಮುಳಿಹುಲ್ಲಿನ ಕಟಾವು ಸಂಭ್ರಮದಿಂದಸಾಗಿತು. ಗುಡ್ಡೆಯ ತುತ್ತತುದಿಯಾದ್ದರಿಂದಲೋ ನಿರಂತರ ಗಾಳಿಬೀಸುತ್ತಿದ್ದರಿಂದ ಬಿಸಿಲಿನ ಬೇಗೆ ಅರಿಯಲಿಲ್ಲ ಎಂಬುದು ಭಾಗವಹಿಸಿದವರ ಮನದಾಳದ ಮಾತುಗಳು.ಜೊತೆಗೆ ನೀರು,ಮಜ್ಜಿಗೆನೀರಿನ ವ್ಯವಸ್ಥೆ ಬಲ ನೀಡಿತು.
ಬೆಳಗ್ಗಿನಿಂದಲೇ ಮಾತೆಯರು ಉಪಾಹಾರದ ವ್ಯವಸ್ಥೆ ಮಾಡಿದ್ದರು.ಸೂರ್ಯ ಮೇಲೇರುತ್ತಿದ್ದಂತೆಯೇ ಪುತ್ತೂರಿನ "ಸಪ್ತ ಫುಡ್" ನವರ ಪೂರಿ,ಅಕ್ಜಿರೊಟ್ಟಿ,ಗಸಿ, ಕಾರ್ಯಕರ್ತರ ಹಸಿವನ್ನು ನೀಗಿಸಿತು.ಮಧ್ಯಾಹ್ನ ಭೋಜನದ ವ್ಯವಸ್ಥೆಯೂ ಮಾಡಲಾಗಿತ್ತು. ಆಹಾರಗಳ ನಿರ್ವಹಣೆ ವ್ಯವಸ್ಥಿವಾಗಿ ನೂಜಿ ವೆಂಕಟೇಶ್ವರ ಭಟ್ ಎಡಕ್ಕಾನ ಇವರ ಮನೆಯಲ್ಲಿ ಮಾಡಲಾಗಿತ್ತು.








