ಬನಾರಿಯಲ್ಲಿ `ಗುರು ನೀತಿ' ಯಕ್ಷಗಾನ ತಾಳಮದ್ದಳೆ
0
ಡಿಸೆಂಬರ್ 09, 2018
ಮುಳ್ಳೇರಿಯ: ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾಸಂಘದ ಕೀರಿಕ್ಕಾಡು ಸ್ಮಾರಕ ಸಾಂಸ್ಕøತಿಕ ಅಧ್ಯಯನ ಕೇಂದ್ರದಲ್ಲಿ ಶಿವ ಕುಮಾರ್ ಬನಾರಿ ಮತ್ತು ಮನೆಯವರಿಂದ ಸೇವಾ ರೂಪವಾಗಿ ಶ್ರೀಕೃಷ್ಣ ಸಂಧಾನದಿಂದಾಯ್ದ `ಗುರು ನೀತಿ' ಯಕ್ಷಗಾನ ತಾಳಮದ್ದಳೆ ಇತ್ತೀಚೆಗೆ ನಡೆಯಿತು.
ವೇದಮೂರ್ತಿ ಶಂಭು ಭಟ್ ಚಾವಡಿಬಾಗಿಲು ಅವರ ಮಾರ್ಗದರ್ಶನದಲ್ಲಿ ಸ್ಥಳ ಸಾನ್ನಿಧ್ಯ ಶ್ರೀ ಗೋಪಾಲಕೃಷ್ಣ ಸ್ವಾಮಿಯ ಪೂಜಾರಾಧನೆಯೊಂದಿಗೆ ಭಾಗವತ ವಿಶ್ವ ವಿನೋದ ಬನಾರಿ ಅವರ ನಿರ್ದೇಶನದೊಂದಿಗೆ ಮುನ್ನಡೆದ ಯಕ್ಷಗಾನ ತಾಳಮದ್ದಳೆಯಲ್ಲಿ ಭಾಗವತರಾಗಿ ದಯಾನಂದ ಬಂದ್ಯಡ್ಕ, ಮೋಹನ ಮೆಣಸಿನಕಾನ, ಈಶ್ವರ ಶರ್ಮ ಪಕಳಕುಂಜ ಅವರು ಸುಶ್ರಾವ್ಯವಾಗಿ ಹಾಡಿ ರಂಜಿಸಿದರು.
ಚೆಂಡೆ ಮದ್ದಳೆ ವಾದನದಲ್ಲಿ ಮಂಡೆಕೋಲು ಅಪ್ಪಯ್ಯ ಮಣಿಯಾಣಿ, ಕಲ್ಲಡ್ಕ ಗುತ್ತು ರಾಮಯ್ಯ ರೈ, ವಿಷ್ಣು ಶರಣ ಬನಾರಿ, ಸದಾನಂದ ಪೂಜಾರಿ ಮಯ್ಯಾಳ ತಮ್ಮ ಕೈಚಳಕವನ್ನು ತೋರಿದರು. ಅರ್ಥಧಾರಿಗಳಾಗಿ ಎಂ.ರಮಾನಂದ ರೈ ದೇಲಂಪಾಡಿ, ಡಿ.ರಾಮಣ್ಣ ಮಾಸ್ತರ್ ದೇಲಂಪಾಡಿ, ಎ.ಜಿ.ಮುದಿಯಾರು, ವಿದ್ಯಾಭೂಷಣ ಪಂಜಾಜೆ ಸಹಕರಿಸಿದರು.
ನಿವೃತ್ತ ಜಿಲ್ಲಾ ನ್ಯಾಯಾಧೀಶ ಕಲಾವಿದ, ಸಾಹಿತಿ ಮನಮೋಹನ ಬನಾರಿ ಅವರು ಉಪಸ್ಥಿತರಿದ್ದು ಅಭಿಪ್ರಾಯ ವ್ಯಕ್ತಪಡಿಸಿದರು. ಪುಷ್ಪಲತಾ ಬನಾರಿ ಸ್ವಾಗತಿಸಿದರು. ಅನಿತಾ ಸುಶಾಂತ್ ವಂದಿಸಿದರು.





