ಅಡ್ಯನಡ್ಕದ ಮಹಿಳಾ ಮಂಡಳಿಯಿಂದ ಕಾರ್ಯಕ್ರಮ ವೈವಿಧ್ಯ
0
ಡಿಸೆಂಬರ್ 09, 2018
ಪೆರ್ಲ: ಶ್ರೀ ದುರ್ಗಾ ಮಹಿಳಾ ಮಂಡಳಿ, ಶ್ರೇಯಾ ಯುವತಿ ಮಂಡಳಿ, ಮಹಿಳಾ ಯಕ್ಷಗಾನ ಸಂಘ ಮತ್ತು ಹವ್ಯಾಸ ಯಕ್ಷಕಲಾ ಸಂಘ ಅಡ್ಯನಡ್ಕ ಇದರ ಸಂಯುಕ್ತ ಆಶ್ರಯದಲ್ಲಿ ಜನತಾ ಹಿರಿಯ ಪ್ರಾಥಮಿಕ ಶಾಲೆ ಅಡ್ಯನಡ್ಕದಲ್ಲಿ ಸಂಯುಕ್ತ ವಾರ್ಷಿಕೋತ್ಸವ, ನೃತ್ಯ, ಯಕ್ಷಗಾನ ತಾಳಮದ್ದಳೆ ಮತ್ತು ಬಯಲಾಟ ಇತ್ತೀಚೆಗೆ ನಡೆಯಿತು.
ಜನತಾ ವಿದ್ಯಾ ಸಂಸ್ಥೆಗಳ ಸಂಚಾಲಕಿ ಡಾ.ಅಶ್ವಿನಿ ಕೃಷ್ಣಮೂರ್ತಿ ದೀಪ ಬೇಳಗಿಸಿ ಉದ್ಘಾಟಿಸಿ, ಕಳೆದ 30 ವರ್ಷಗಳಿಂದ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವ ಮಹಿಳಾ ಮಂಡಲವು ಯುವತಿಯರಿಗೆ ಮಾರ್ಗದರ್ಶಕ ಕೆಲಸವನ್ನು ಮಾಡಿದೆ. ಮಂದೆಯೂ ಇದು ಮುಂದುವರಿಯಲಿ ಎಂದು ಶುಭ ಹಾರೈಸಿದರು. ಸಭಾಧ್ಯಕ್ಷತೆಯನ್ನು ಕೇಪು ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಯಶಸ್ವಿನಿ ನೆಕ್ಕರೆ ವಹಿಸಿದ್ದರು.
ಕುಂಚಿನಡ್ಕ ಕೃಷ್ಣ ಭಟ್ ಮತ್ತು ರಾಜಗೋಪಾಲ ಜೋಶಿ ಮೈರ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿದರು. ಯುವತಿ ಮಂಡಲದ ಅಧ್ಯಕ್ಷೆ ವೇದಾವತಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಯಕ್ಷಗಾನ ರಂಗಕ್ಕೆ ಮತ್ತು ದೀರ್ಘಕಾಲ ಈ ಮಹಿಳಾ ಸಂಘಟನೆ ಸಲಹೆಗಾರರಾಗಿ ಸಹಕರಿಸಿದ ಶ್ಯಾಮ ಭಟ್ ಪಕಳಕುಂಜ ಮತ್ತು ಚಕ್ರಕೋಡಿ ನಾರಾಯಣ ಶಾಸ್ತ್ರಿಗಳ ಶಿಷ್ಯೆಯಾಗಿ ಕರ್ನಾಟಕ ಶಾಸ್ತ್ರೀಯ ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಂಗೀತ ವಿದುಷಿ ಕುಂಚಿನಡ್ಕ ಶಕುಂತಲಾ ಭಟ್ ಅವರನ್ನು ಸಮ್ಮಾನಿಸಲಾಯಿತು. ಗುಂಡ್ಯಡ್ಕ ಈಶ್ಚರ ಭಟ್ ಮತ್ತು ಗೀತಾ ಸಾರಡ್ಕ ಅಭಿನಂದನಾ ಭಾಷಣ ಮಾಡಿದರು.
ರತ್ನಾ ಟಿ.ಕೆ. ಭಟ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೃತಿ ಅರಿಕೆ ಪದವು ವರದಿ ವಾಚಿಸಿದರು. ಯುವತಿ ಮಂಡಲದ ಸದಸ್ಯೆ ಶಶಿಕಲಾ ವಂದಿಸಿದರು. ನಂತರ ಪಂಚವಟಿ ಪ್ರಸಂಗದ ತಾಳಮದ್ದಳೆ, ಮಹಿಳೆಯರಿಂದ ಪ್ರಮೀಳಾರ್ಜುನ ಮತ್ತು ಏಕಾದಶಿ ಮಹಾತ್ಮೆ ಯಕ್ಷಗಾನ ಬಯಲಾಟ ನಡೆಯಿತು. ಕನ್ನಡ ಮತ್ತು ಸಂಸ್ಕøತಿ ಇಲಾಖೆ ಮಂಗಳೂರು ಯಕ್ಷಗಾನ ಕಾರ್ಯಕ್ರಮವನ್ನು ಪ್ರಾಯೋಜಿಸಿತ್ತು.





