ರಾಷ್ಟ್ರ ಮಟ್ಟದ ಯೋಗ ಸ್ಪರ್ಧೆಗೆ ಎಡನೀರು ಸ್ವಾಮಿಜೀಸ್‍ನ ಅಶ್ವಿನ್ ಆಯ್ಕೆ
0
ಡಿಸೆಂಬರ್ 09, 2018
ಬದಿಯಡ್ಕ: ತಿರುವನಂತಪುರದಲ್ಲಿ ನಡೆದ ಪ್ರಾಂತ್ಯ ಶಾಲಾ ಕ್ರೀಡಾ ಕೂಟದಲ್ಲಿನ ಯೋಗ ಸ್ಪರ್ಧೆಯಲ್ಲಿ ಎಡನೀರು ಸ್ವಾಮೀಜೀಸ್ ಹೈಯರ್ ಸೆಕೆಂಡರಿ ಶಾಲೆಯ ಪ್ಲಸ್ ಟು ತರಗತಿಯ ವಿದ್ಯಾರ್ಥಿ ಅಶ್ವಿನ್ ಕೆ.ಪಿ. ಎ ಗ್ರೇಡ್‍ನೊಂದಿಗೆ ದ್ವಿತೀಯ ಸ್ಥಾನ ಗಳಿಸಿ ರಾಷ್ಟ್ರ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ಪೈಕ ಪೆÇಟ್ಟಿಪಳ್ಳದ ಎನ್.ಕೆ.ಶಿವರಾಮ ಹಾಗು ಜಯಚಿತ್ರ ದಂಪತಿಯ ಪುತ್ರನಾದ ಈತ ಕಲಿಕೆಯಲ್ಲೂ ಮುಂದಿದ್ದು ಜಿಲ್ಲಾ ಗಣಿತ ವಿಜ್ಞಾನ ಮೇಳದಲ್ಲಿ ಎ ಗ್ರೇಡ್‍ನೊಂದಿಗೆ ಮೂರನೇ ಸ್ಥಾನ ಪಡೆದಿದ್ದಾನೆ. ರಾಷ್ಟ್ರ ಮಟ್ಟದ ಸ್ಪರ್ಧೆಗಳು ಜನವರಿ ತಿಂಗಳಲ್ಲಿ ದೆಹಲಿಯಲ್ಲಿ ನಡೆಯಲಿದೆ.





