ವಾಣೀನಗರ:ಎನ್ನೆಸ್ಸೆಸ್ ವಿದ್ಯಾರ್ಥಿಗಳಿಂದ ಕೃಷಿತೋಟ, ಅಣೆಕಟ್ಟು ಸಂದರ್ಶನ
0
ಡಿಸೆಂಬರ್ 28, 2018
ಪೆರ್ಲ:ಪೆರ್ಲ ನಾಲಂದ ಮಹಾವಿದ್ಯಾಲಯದ ಎನ್ನೆಸ್ಸೆಸ್ ಸೇವಾ ಶಿಬಿರದ ಮಾನವ ಸಂಪನ್ಮೂಲ ಅಭಿವೃದ್ಧಿ ತರಗತಿ ಭಾಗವಾಗಿ ವಿದ್ಯಾರ್ಥಿಗಳು ಮಂಗಳವಾರ ವಾಣೀನಗರ ಪತ್ತಡ್ಕದ ಕೃಷಿತೋಟ ಹಾಗೂ ಅಣೆಕಟ್ಟು ಸಂದರ್ಶನ ನಡೆಸಿ ಮಾಹಿತಿ ಪಡೆದರು.
ಎಣ್ಮಕಜೆ ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಕ್ಯಾಂಪ್ಕೋ ಹಾಗೂ ನಾಲಂದ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಪತ್ತಡ್ಕ ಗಣಪತಿ ಭಟ್ ನಿತ್ಯ ಜೀವನದಲ್ಲಿ ಕೃಷಿಯ ಪಾತ್ರ ವಿಷಯದ ಉಪನ್ಯಾಸ ನೀಡಿದರು.ಉಪನ್ಯಾಸಕ ಶ್ರೀನಿಧಿ, ಸಿಬ್ಬಂದಿ ಕಾರ್ಯದರ್ಶಿ ಕೇಶವ ಶರ್ಮ, ಯೋಜನಾಧಿಕಾರಿ ಸುರೇಶ್ ಕೆ.ಎಂ., ಎನ್ನೆಸ್ಸೆಸ್ ಕಾರ್ಯದರ್ಶಿಗಳಾದ ರೂಪಾ, ಸುಧೀಶ್ ಜೊತೆಗಿದ್ದರು.ಬೆಳಿಗ್ಗೆ ವಿದ್ಯಾರ್ಥಿಗಳಿಂದ ಶ್ರಮದಾನ, ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.





