ಕುಂಬಳೆಯಲ್ಲಿ ದೀಪ ಜ್ವಾಲೆಯ ವಿನೂತನ ಪ್ರತಿಭಟನೆ
0
ಡಿಸೆಂಬರ್ 07, 2018
ಕುಂಬಳೆ: ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಯ್ಯಪ್ಪ ವೃತಧಾರಿ ಕೆ ಸುರೇಂದ್ರನ್ ಅವರನ್ನು ವಿನಾಃ ಕಾರಣ ಸುಳ್ಳು ಆಪಾದನೆಗಳ ದೂರು ದಾಖಲಿಸಿ ಜೈಲಿಗಟ್ಟಿರುವ ಕೇರಳ ರಾಜ್ಯ ಸರಕಾರದ ಸರ್ವಾಧಿಕಾರಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿರುದ್ಧ ಗುರುವಾರ ಸಂಜೆ ಕುಂಬ್ಳೆ ಪೇಟೆಯಲ್ಲಿ ಬಿಜೆಪಿ ಮತ್ತು ಯುವಮೋರ್ಚಾ ವತಿಯಿಂದ ಪ್ರತಿಭಟನಾ ಮೆರವಣಿಗೆ ನಡೆಯಿತು.ಈ ಸಂದರ್ಭ ಮಣ್ಣಿನ ಹಣತೆಯಲ್ಲಿ ದೀಪ ಜ್ವಾಲೆ ಉರಿಸುವ ಮೂಲಕ ವಿನೂತನ ಶೈಲಿಯ ಪ್ರತಿಭಟನೆ ನಡೆಸಲಾಯಿತು.
ಕಾರ್ಯಕ್ರಮವನ್ನು ಬಿ.ಜೆ.ಪಿ ಮಂಜೇಶ್ವರ ಮಂಡಲ ಅಧ್ಯಕ್ಷ ಕೋಳಾರು ಸತೀಶ್ಚಂದ್ರ ಭಂಡಾರಿ ಅವರು ಉದ್ಘಾಟಿಸಿದರು. ಯುವಮೋರ್ಚಾ ನೇತಾರರದ ವಿಜಯ್ ರೈ, ಧನಂಜಯ ಮಧೂರು, ಬಿಜೆಪಿ ನೇತಾರರದ ರಮೇಶ್ ಭಟ್, ಸುಜಿತ್ ರೈ, ಚಂದ್ರಕಾಂತ ಶೆಟ್ಟಿ, ಧನರಾಜ್, ಸಂದೀಪ್ ಗಟ್ಟಿ, ಬಾಬು ಗಟ್ಟಿ, ಮಣಿಕಂಠ ರೈ, ಮೋಹನ ಬಂಬ್ರಾಣ ಹಾಗು ಕಾರ್ಯಕರ್ತರು ಭಾಗವಹಿಸಿದರು.ಕುಂಬ್ಳೆ ಬಿಜೆಪಿ ಪಂಚಾಯತಿ ಪ್ರಧಾನ ಕಾರ್ಯದರ್ಶಿ ಕೆ.ಸುಧಾಕರ ಕಾಮತ್ ಸ್ವಾಗತಿಸಿ, ಸುರೇಶ ಶಾಂತಿಪಳ್ಳ ವಂದಿಸಿದರು.





