ಕುಕ್ಕಂಗೋಡ್ಲು ಶ್ರೀಕ್ಷೇತ್ರದಲ್ಲಿ ಭಾನುವಾರ ಶ್ರಮದಾನ
0
ಡಿಸೆಂಬರ್ 07, 2018
ಬದಿಯಡ್ಕ: ನೀರ್ಚಾಲು ಸಮೀಪದ ಪ್ರಾಚೀನವೂ ಅತ್ಯಂತ ಕಾರಣೀಕವೂ ಉಳ್ಳ ಕುಕ್ಕಂಕೂಡ್ಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಜೀರ್ಣೋದ್ಧಾರ ಪ್ರಕ್ರಿಯೆಗಳು ನಡೆಯುತ್ತಿದ್ದು, ಶ್ರೀ ಕ್ಷೇತ್ರದ ಜೀರ್ಣೋದ್ಧಾರ ಕೆಲಸಗಳು ಅಂತಿಮ ಹಂತಕ್ಕೆ ತಲಪಿದೆ. ಪ್ರಸ್ತುತ ಸುತ್ತು ಪೌಳಿಯ ಮಾಡಿನ ಕೆಲಸ ಮುಕ್ತಾಯ ಹಂತದಲ್ಲಿದೆ. ಆ ಪ್ರಯುಕ್ತ ಡಿ. 9 ರಂದು ಭಾನುವಾರ ಶ್ರಮದಾನದ ಮೂಲಕ ಮಾಡಿಗೆ ಹಂಚು ಹೊದೆಸುವ ಕೆಲಸ ನೆರವೇರಲಿದೆ.
ಭಜಕರು ಹೆಚ್ಚಿನ ಸಂಖ್ಯೆಯಲ್ಲಿ ಭಾನುವಾರ ಬೆಳಿಗ್ಗೆ 10 ಕ್ಕೆ ಮೊದಲು ಶ್ರೀ ಕ್ಷೇತ್ರಕ್ಕೆ ಆಗಮಿಸಿ ದೇವತಾ ಕಾರ್ಯದಲ್ಲಿ ಭಾಗವಹಿಸಿ ದೇವರ ಅನುಗ್ರಹಕ್ಕೆ ಪಾತ್ರರಾಗಬೇಕಾಗಿ ಕ್ಷೇತ್ರ ಪ್ರಕಟಣೆಯಲ್ಲಿ ವಿನಂತಿಸಲಾಗಿದೆ.





