ಕೆಎಸ್‍ಟಿಯ ಪೆರ್ಲ ಘಟಕ ಕನ್ವೆಂಶನ್
0
ಡಿಸೆಂಬರ್ 26, 2018
ಪೆರ್ಲ: ಕೇರಳ ಸ್ಟೇಟ್ ಟೈಲರ್ಸ್ ಅಸೋಸಿಯೇಶನ್(ಕೆ.ಎಸ್.ಟಿ.ಎ.)ಪೆರ್ಲ ಘಟಕದ ಸಮ್ಮೇಳನ ಇತ್ತೀಚೆಗೆ ಪೆರ್ಲ ಪಡ್ರೆ ಸಭಾ ಭವನದಲ್ಲಿ ಜರಗಿತು.
ಪೆರ್ಲ ಘಟಕದ ಅಧ್ಯಕ್ಷ ಚಂದ್ರನ್ ಅಧ್ಯಕ್ಷತೆ ವಹಿಸಿದ್ದರು. ಕೆ.ಎಸ್.ಟಿ.ಎ ಜಿಲ್ಲಾ ಅಧ್ಯಕ್ಷ ಮೋಹನ್ ದಾಸ್ ಕುಂಬಳೆ ಸಮ್ಮೇಳನ ಉದ್ಘಾಟಿಸಿದರು. ಘಟಕದ ಸದಸ್ಯ ಅಪ್ಪು ಪಾಟಾಳಿಯವರ ನಿಧನಕ್ಕೆ ಮೌನ ಪಾರ್ಥನೆಯ ಮೂಲಕ ನಮನ ಸಲಲಿಸಲಾಯಿತು.ಕಾರ್ಯದರ್ಶಿ ವಾರ್ಷಿಕ ವರದಿಯನ್ನು ಮಂಡಿಸಿದರು. ಕೋಶಾಧಿಕಾರಿ ರತ್ನಾಕರ ನಾಯಕ್ ಲೆಕ್ಕಪತ್ರವನ್ನು ಸಭೆಯ ಮುಂದಿಟ್ಟರು.ಘಟಕದ ಹಿರಿಯ ದರ್ಜಿಗಳಾದ ಗೋವಿಂದ ಮುಲ್ಕಿ ಅವರನ್ನು ಸನ್ಮಾನಿಸಲಾಯಿತು.ಕೆ.ಎಸ್.ಟಿ.ಎ ಜಿಲ್ಲಾ ಕಾರ್ಯದರ್ಶಿ ಮುಕುಂದನ್ ರವರು ಕ್ಷೇಮನಿಧಿ,ಪಿಂಚಣಿ ಮೊದಲಾದ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ತಾಲೂಕು ಅಧ್ಯಕ್ಷ ಶಂಕಪ್ಪ ಗಟ್ಟಿ, ತಾಲೂಕು ಕಾರ್ಯದರ್ಶಿ ಸತೀಶ ಆಚಾರ್ಯ, ಜಿಲ್ಲಾ ಸದಸ್ಯ ರಾಮಣ್ಣ ಪೂಜಾರಿ ಮೊದಲಾದವರು ಮಾತನಾಡಿದರು. ಕಾರ್ಯದರ್ಶಿ ರೋಬರ್ಟ್ ಡಿ ಸೋಜರು ಸ್ವಾಗತಿಸಿ, ಕೋಶಾಧಿಕಾರಿ ರತ್ನಾಕರ ನಾಯಕ್ ವಂದಿಸಿದರು.


