ಧಾರ್ಮಿಕ ಪ್ರಜ್ಞೆಯಿಂದ ಜೀವನ ಮೌಲ್ಯ ಕಾಪಾಡಲು ಸಾಧ್ಯ=ಮಾಣಿಲ ಶ್ರೀ ವಿಕ್ರಮ ಫ್ರೆಂಡ್ಸ್ ಕ್ಲಬ್‍ನ ನೂತನ ಕಟ್ಟಡದ ಲೋಕಾರ್ಪಣೆಗೊಳಿಸಿ ಶ್ರೀಗಳ ಅಭಿಮತ
0
ಡಿಸೆಂಬರ್ 26, 2018
ಕುಂಬಳೆ: ಧಾರ್ಮಿಕ ಪ್ರಜ್ಞೆಯೊಂದಿಗೆ ಜೀವನ ಮೌಲ್ಯಗಳನ್ನು ಕಾಪಿಡುವ ಮೂಲಕ ಬದುಕನ್ನು ಅರ್ಥಪೂರ್ಣಗೊಳಿಸಲು ಸಾಧ್ಯ. ಹಿರಿಯರ ಆದರ್ಶ, ಮಾದರಿ ಜೀವನ ಶೈಲಿಯನ್ನು ಹೊಸ ತಲೆಮಾರು ಅನುಸರಿಸುವುದರ ಮೂಲಕ ಸುಸ್ಥಿರ ಸಮಾಜ ಸೃಷ್ಟಿ ಸಾಧ್ಯ ಎಮದು ಮಾಣಿಲ ಶ್ರೀಧಾಮದ ಮೋಹನದಾಸ ಪರಮಪೂಜ್ಯ ಶ್ರೀಗಳು ಅನುಗ್ರಹ ಭಾಷಣಗೈದು ತಿಳಿಸಿದರು.
ಕುಂಬಳೆ ಸಮೀಪದ ಬಂಬ್ರಾಣ ತಿಲಕನಗರದಲ್ಲಿ ಇತ್ತೀಚೆಗೆ ವಿಕ್ರಮ ಫ್ರೆಂಡ್ಸ್ ಕ್ಲಬ್‍ನ ನೂತನ ಕಟ್ಟಡದ ಲೋಕಾರ್ಪಣೆ ಸಮಾರಂಭವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅವರು ಆಶೀರ್ವಚನಗೈದರು.
ಶಿಶು ಮಂದಿರ, ಬಾಲಗೋಕುಲ ಮೊದಲಾದವುಗಳಿಂದ ಎಳೆಯ ಮನಸ್ಸುಗಳಲ್ಲಿ ಧಾರ್ಮಿಕ ಪ್ರಜ್ಞೆ, ಸಂಸ್ಕøತಿಯ ಮಹತ್ವವನ್ನು ತಿಳಿಸುವ ಕರ್ತವ್ಯ ನೆರವೇರುತ್ತಿರುವುದು ಸ್ತುತ್ಯರ್ಹವಾಗಿದೆ. ಸಮಾಜದ ಸಮಗ್ರ ಅಭಿವೃದ್ದಿಗೆ ಸ್ಥಳೀಯ ಸಂಘಸಂಸ್ಥೆಗಳು ನೀಡುವ ಕೊಡುಗೆಗಳಿಂದ ಅಭಿವೃದ್ದಿಯ ವೇಗದ ಗತಿ ಹೆಚ್ಚುತ್ತದೆ. ಯುವ ಸಮೂಹ ಸೇವಾ ಕೈಂಕರ್ಯದ ಮೂಲಕ ಬದುಕಿನ ಸಾಥ್ರ್ಯಕ್ಯಕ್ಕೆ ತನ್ಮೂಲಕ ಕೊಡುಗೆಗಳನ್ನು ನೀಡುವುದು ಕರ್ತವ್ಯವೆಂದು ಭಾವಿಸಬೇಕು ಎಂದು ತಿಳಿಸಿದರು.
ವಿಕ್ರಮ ಪ್ರೆಂಡ್ಸ್ ಕ್ಲಬ್ ಅಧ್ಯಕ್ಷ ನಾಗೇಶ ಆಚಾರ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಚಕ್ರಪಾಣಿ ದೇವ ಪೂಜಿತ್ತಾಯ ಆರಿಕ್ಕಾಡಿ ಉಪಸ್ಥಿತರಿದ್ದು ಶುಭಹಾರೈಸಿದರು. ಯೋಗಾಚಾರ್ಯ ಪುಂಡರೀಕಾಕ್ಷ ಬೆಳ್ಳೂರು, ಕೇರಳ ಗ್ರಾಮೀಣ ಬ್ಯಾಂಕ್ ವಿಭಾಗೀಯ ನಿವೃತ್ತ ಪ್ರಬಂಧಕ ದಾಮೋದರ ದೇಲಂಪಾಡಿ, ನ್ಯಾಯವಾದಿ ಪಿ.ಮುರಳೀಧರನ್, ಬಂಟರ ಸಂಘ ಮಂಗಲ್ಪಾಡಿ ಘಟಕದ ಶ್ರೀಧರ ಶೆಟ್ಟಿ ಮುಟ್ಟ, ನ್ಯಾಯವಾದಿ ದಿನೇಶ್ ಎನ್.ಶೆಟ್ಟಿ, ನಾರಾಯಣ ಪೂಜಾರಿ ಕೊಟ್ಯದ ಮನೆ ಮೊದಲಾದವರು ಉಪಸ್ಥಿತರಿದ್ದು ಶುಭಹಾರೈಸಿದರು.
ಜೆ.ಪಿ.ಬಂಬ್ರಾಣ ಪ್ರಾಸ್ತಾವಿಕವಾಗಿ ಮಾತನಾಡಿ ವರದಿ ವಾಚಿಸಿದರು. ಹರೀಶ್ ಆಳ್ವ ಸ್ವಾಗತಿಸಿ, ದಿನೇಶ್ ಕೊಟ್ಯದಮನೆ ವಂದಿಸಿದರು. ಸದಾನಂದ ಆರಿಕ್ಕಾಡಿ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದ ಅಂಗವಾಗಿ ಗಣಪತಿ ಹವನ, ಸತ್ಯನಾರಾಯಣ ಪೂಜೆ, ಮಧ್ಯಾಹ್ನ ಅನ್ನಸಂತರ್ಪಣೆ, ಬಳಿಕ ಕೀರ್ತನ ಕುಟೀರದ ಕಲಾರತ್ನ ಶಂ.ನಾ.ಅಡಿಗ ಕುಂಬಳೆ ಇವರ ಶಿಷ್ಯಂದಿರಾದ ಗಾಯತ್ರೀ ಮತ್ತು ಶ್ರಾವಣಿ ಕೊಮಡೆವೂರು ಅವರಿಂದ ಹರಿಕಥಾ ಸಂಕೀರ್ತನೆ ನಡೆಯಿತು. ರಾತ್ರಿ ಸಸಿಹಿತ್ಲು ಶ್ರೀಭಗವತೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯವರಿಂದ ಶ್ರೀಭಗವತೀ ಮಹಾತ್ಮ್ಯೆ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು.



