ಮಂಜೇಶ್ವರ : ಮರ್ಹೂಂ ಶೈಖುನಾ ಸುರಿಬೈಲು ಉಸ್ತಾದ್ 17 ನೇ ಆಂಡ್ ನೇರ್ಚೆ ಜನವರಿ 3,4 ಗುರುವಾರ ಮತ್ತು ಶುಕ್ರವಾರ ನಡೆಯಲಿದೆಯೆಂದು ಸಂಘಟಕರು ಮಂಜೇಶ್ವರ ಪ್ರೆಸ್ ಕ್ಲಬ್ ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಜನವರಿ 3 ರಂದು ಗುರುವಾರ ಸಂಜೆ ನಡೆಯುವ ಮಖ್‍ಬರ ಝಿಯಾರತ್ ಗೆ ಅಬೂಬಕ್ಕರ್ ಮುಸ್ಲಿಯಾರ್ ಬೊಳ್ಮಾರ್ ನೇತೃತ್ವ ನೀಡುವರು. ಬಳಿಕ ಧ್ವಜಾರೋಹಣ ಹಾಗೂ ಜಲಾಲಿಯ್ಯಾ ರಾತೀಬ್ ಮಜ್ಲಿಸ್ ನಡೆಯಲಿದೆ. ಪಿ.ಎ ಅಬ್ದುಲ್ ರಹ್ಮಾನ್ ಮುಸ್ಲಿಯಾರ್ ಬಾಖವಿ ಅಲ್ ಜುನೈದಿ ನೇತೃತ್ವ ನೀಡುವರು. ಸಯ್ಯದ್ ಮುಶ್ತಾಕುರ್ರಹ್ಮಾನ್ ತಂಙಳ್ ದುಆಗೆ ನೇತೃತ್ವ ನೀಡುವರು. ಬಳಿಕ ಬುರ್ದಾ ಮಜ್ಲಿಸ್ ನಡೆಯಲಿದೆ. ರಾತ್ರಿ 9 ಘಂಟೆಗೆ ಮೌಲಾನಾ ಲತೀಫ್ ಸಅದಿ ಪಯಶ್ವಿ ಮುಖ್ಯ ಭಾಷಣ ಮಾಡುವರು.
ಜನವರಿ 4 ರಂದು ಶುಕ್ರವಾರ ಜುಮುಅ ನಮಾಜಿನ ಬಳಿಕ ನಡೆಯುವ ಖತಮುಲ್ ಖುರ್‍ಆನ್ ಗೆ ಸಯ್ಯದ್ ಇಬ್ರಾಹಿಂ ಪೂಕುಞÂ್ಞ ತಙಳ್ ನೇತೃತ್ವ ನೀಡುವರು. ಬಳಿಕ ಸಂದಲ್ ಮೆರವಣಿಗೆ ಸೌಹಾರ್ಧ ಸಂಗಮ ನಡೆಯಲಿದೆ. 6.30 ಕ್ಕೆ ಆಂಡ್ ನೇರ್ಚೆ ಹಾಗೂ ಸಮಾರೋಪ ಮಹಾ ಸಮ್ಮೇಳನ ನಡೆಯಲಿದೆ. ಸಯ್ಯದ್ ಜಲಾಲುದ್ದೀನ್ ತಂಙಳ್ ಮಳ್‍ಹರ್, ಅಶ್ರಫ್ ತಂಙಳ್ ಆದೂರು, ಶಿಹಾಬುದ್ದೀನ್ ತಂಙಳ್ ತಲಕ್ಕಿ , ಖಾಸಿಂ ತಂಙಳ್ ಸಹಿತ ಹಲವು ಗಣ್ಯರು ಉಪಸ್ಥಿತರಿರುವರು.
ಮೌಲಾನ್ ಪೇರೋಡ್ ಉಸ್ತಾದ್ ಮುಖ್ಯ ಭಾಷಣ ಮಾಡುವರು. ಸಯ್ಯದ್ ಬಾಯಾರ್ ತಂಙಳ್ ಸಮಾರೋಪ ಪ್ರಾರ್ಥನೆ ನಡೆಸುವರು. ಪತ್ರಿಕಾ ಗೋಷ್ಠಿಯಲ್ಲಿ ಫಾರೂಕ್ ಅಶ್ಹರಿಯ್ಯಾ, ಬೊಳ್ಮಾರ್ ಉಸ್ತಾದ್, ಮೊಹಮ್ಮದ್ ಅಲೀ ಸಖಾಫಿ, ಹಾರಿಸ್ ಹನೀಫಿ ಬಾಳಿಯೂರು, ಮೊಹ್ಮಮದ್ ಸಖಾಫಿ ತೋಕೆ ಉಪಸ್ಥಿತರಿದ್ದರು.





