ಮಂಜೇಶ್ವರ: ಇತಿಹಾಸ ಪ್ರಸಿದ್ದ ಕಡಂಬಾರ್ ವಲಿಯುಲ್ಲಾಹಿ ಹಾಜಿಯಾರ್ ಉಪ್ಪಾಪ ಉರೂಸ್‍ಗೆ ಮಂಗಳವಾರ ಸಂಜೆ ಚಾಲನೆ ನೀಡಲಾಯಿತು. ಮಂಗಳವಾರ ಸಂಜೆ ನಡೆದ ಮಖಾಂ ಝಿಯಾರತ್ ಹಾಗೂ ಧ್ವಜಾರೋಹಣಕ್ಕೆ ಸಯ್ಯದ್ ಅತ್ತಾವುಲ್ಲಾ ತಂಙಳ್ ಉದ್ಯಾವರ ನೇತೃತ್ವ ನೀಡಿದರು.
ಬಳಿಕ ಮಗ್ರಿಬ್ ನಮಾಝಿನ ಬಳಿಕ ಆಟ್ಟಕ್ಕೋಯ ತಂಙಳ್ ಕುಂಬೋಳ್ ಪ್ರಾರ್ಥಣೆ ನೆರವೇರಿಸಿದರು. ರಾತ್ರಿ ವೇದಿಕೆಯಲ್ಲಿ ಕಡಂಬಾರ್ ಮುದರ್ರಿಸ್ ಎಂ.ಪಿ ಮೊಹಮ್ಮದ್ ಸಅದಿ ಅಧ್ಯಕ್ಷತೆಯಲ್ಲಿ ನಡೆದ ಉರೂಸ್ ಹಾಗೂ ಧಾರ್ಮಿಕ ಪ್ರವಚನದ ಉದ್ಘಾಟನಾ ಕಾರ್ಯಕ್ರಮಕ್ಕೆ ಸಯ್ಯದ್ ಅಬ್ದುಲ್ ರಹ್ಮಾನ್ ಶಹೀರ್ ಅಲ್ ಬುಖಾರಿ ತಂಙಳ್ ಮಳ್ಹಯರ್ ಚಾಲನೆ ನೀಡಿದರು. ಅಬ್ದುಲ್ ಲತೀಫ್ ಸಅದಿ ಪಝಶ್ವಿ ಮುಖ್ಯ ಭಾಷಣ ಮಾಡಿದರು.
ವೇದಿಕೆಯಲ್ಲಿ ಉರೂಸ್ ಸಮಿತಿ ಅಧ್ಯಕ್ಷ ಅಬ್ದುಲ್ ಅಝೀಝ್ ಪಿ ಬರ್ವ, ಪ್ರಧಾನ ಕಾರ್ಯದರ್ಶಿ ಸಿ.ಎ. ತಾಜುದ್ದೀನ್, ಪದಾಧಿಕಾರಿ ಎ.ಕೆ.ಎಂ ಅಶ್ರಫ್, ಕಡಂಬಾರ್ ಮಸೀದಿ ಅಧ್ಯಕ್ಷ ಅಬೂಬಕ್ಕರ್ ಕೆ ಹೊಸಮನೆ, ಮಸೀದಿ ಕಾರ್ಯದರ್ಶಿ ಇ ಎನ್ ಅಬೂಬಕ್ಕರ್ ಹಾಜಿ ಗಾಂಧೀ ನಗರ, ಕೋಶಾಧಿಕಾರಿ ಉಸ್ಮಾನ್ ಇಡಿಯಾ, ಅಬ್ಬಾಸ್ ಹೊಸಮನೆ, ಹಾಜಿ ಕೆ ಅಬ್ದುಲ್ಲ ಮುಸ್ಲಿಯಾರ್, ಕಡಂಬಾರು ಖತೀಬ್ ಮಹ್‍ಶೂಕ್ ಫೈಝಿ, ಅಬೂಬಕ್ಕರ್ ಮುಸ್ಲಿಯಾರ್, ಶಫೀಕ್ ಯಮಾನಿ, ಅಬ್ದುಲ್ ಖಾದರ್ ಮುಲ್ಲೂದಿ, ಅಬ್ದುಲ್ಲ ಕೆ ಇಡಿಯ ಮೊದಲಾದವರು ಉಪಸ್ಥಿತರಿದ್ದರು.
ಜನವರಿ 12 ರ ತನಕ ನಡೆಯುವ ಧಾರ್ಮಿಕ ಪ್ರವಚನದಲ್ಲಿ ವಿವಿಧ ಧಾರ್ಮಿಕ ಮುಂದಾಳುಗಳು ಉಪನ್ಯಾಸ ನೀಡುವರು. ಜನವರಿ 12 ರಂದು ರಾತ್ರಿ ನಡೆಯುವ ಸಮಾರೋಪ ಸಮಾರಂಭವನ್ನು ಸಮಸ್ತ ಕೇರಳ ಜಂಈಯ್ಯತ್ತುಲ್ ಉಲಮಾ ಅಧ್ಯಕ್ಷ ಖಾಝಿ ಜಿಫ್ರೀ ಮುತ್ತುಕ್ಕೋಯ ತಂಙಳ್ ಉದ್ಘಾಟಿಸುವರು. ಅನ್ವರ್ ಮುಹ್ಯುದ್ದೀನ್ ಹುದಹಿ ಆಲುವ ಮುಖ್ಯ ಭಾಷಣ ಮಾಡುವರು. ಜನವರಿ 13 ರಂದು ಭಾನುವಾರ ಸುಬುಹಿ ನಮಾಜಿನ ಬಳಿಕ ನಡೆಯುವ ಖತಮುಲ್ ಕುರ್‍ಆನ್ ಗೆ ಎಂ.ಪಿ ಮೊಹಮ್ಮದ್ ಸಅದಿ ನೇತೃತ್ವ ನೀಡುವರು. ಬೆಳಿಗ್ಗೆ 10 ಘಂಟೆಗೆ ನಡೆಯುವ ಮೌಲೀದ್ ಪಾರಾಯಣ ಕ್ಕೆ ಕೆ.ಎಸ್ ಅಲೀ ತಂಙಳ್ ಕುಂಬೋಲ್ ನೇತೃತ್ವ ನೀಡುವರು. ಅಬ್ದುಲ್ ಖಾದರ್ ಮುಸ್ಲಿಯಾರ್ ಕಾಸರಗೋಡು ಪ್ರಾರ್ಥನೆಗೆ ನೇತೃತ್ವ ನೀಡುವರು. ಬಳಿಕ ಅನ್ನದಾನ ನಡೆಯಲಿದೆ. ಜನವರಿ 13 ಭಾನುವಾರ ಹಗಲು ಉರೂಸ್ ನೇರ್ಚೆ ನಡೆಯಲಿದೆ.





