ಕೇರಳ ಸೀನಿಯರ್ ಸಿಟಿಸನ್ಸ್ ಫೋರಂ - ಜಿಲ್ಲಾ ಸಮ್ಮೇಳನ ಮಾರ್ಚ್ 14ರಂದು ಬದಿಯಡ್ಕದಲ್ಲಿ
0
ಮಾರ್ಚ್ 12, 2019
ಬದಿಯಡ್ಕ: ಕೇರಳದ ವಯೋಜನರ ಕ್ಷೇಮಕ್ಕಾಗಿಯೂ, ಅವರ ಸಂರಕ್ಷಣೆಗಾಗಿಯೂ ಜಾತಿ ಮತ ಬೇಧವಿಲ್ಲದೆ ಸರಕಾರದಿಂದ ಅಂಗೀಕರಿಸಲ್ಪಟ್ಟು ಕಾರ್ಯಾಚರಿಸುತ್ತಿರುವ ಸಂಘಟನೆ ಕೇರಳ ಸೀನಿಯರ್ ಸಿಟಿಸನ್ಸ್ ಫೋರಂನ 22ನೇ ರಾಜ್ಯ ಸಮ್ಮೇಳನದ ಅಂಗವಾಗಿ ಕಾಸರಗೋಡು ಜಿಲ್ಲಾ ಸಮ್ಮೇಳನ ಮಾರ್ಚ್ 14ರಂದು ಬದಿಯಡ್ಕ ಶ್ರೀ ಗಣೇಶ ಮಂದಿರ(ಜಿ.ಕೆ.ಭಟ್ ನಗರ)ದಲ್ಲಿ ನಡೆಯಲಿರುವುದು ಎಂದು ಸಂಘಟನೆಯ ಜಿಲ್ಲಾ ಕಾರ್ಯದರ್ಶಿ, ಸಂಘಾಟಕ ಸಮಿತಿ ಸಂಚಾಲಕ ಸುಕುಮಾರನ್ ಮಾಸ್ತರ್ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದ್ದಾರೆ.
ಬದಿಯಡ್ಕ ಗ್ರಾಮಪಂಚಾಯತ್ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಸಂಘಟನಾ ಸಮಿತಿಯ ಅಧ್ಯಕ್ಷ, ಬದಿಯಡ್ಕ ಗ್ರಾಮಪಂಚಾಯತ್ ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್ ಮಾತನಾಡಿ, ಹಿರಿಯ ನಾಗರಿಕರ ಜಿಲ್ಲಾ ಸಮ್ಮೇಳನವು ಬದಿಯಡ್ಕದಲ್ಲಿ ನಡೆಯುತ್ತಿರುವುದು ಸಂತಸದ ವಿಚಾರವಾಗಿದ್ದು, ಗ್ರಾಮಪಂಚಾಯತ್ ಸಂಪೂರ್ಣ ಬೆಂಬಲವನ್ನು ನೀಡಿ ಕಾರ್ಯಕ್ರಮವು ಜನಮಾನಸದಲ್ಲಿ ಸದಾ ನೆಲೆಯೂರುವಂತೆ ಯಶಸ್ಸನ್ನು ಕಾಣಲಿ ಎಂದರು.
ಕೇರಳ ಸೀನಿಯರ್ ಸಿಟಿಸನ್ಸ್ ಫೋರಂನ ಜಿಲ್ಲಾ ಅಧ್ಯಕ್ಷ ಟಿ.ಅಬೂಬಕ್ಕರ್ ಹಾಜಿ, ಹಿರಿಯರಾದ ಕೃಷ್ಣ ಭಟ್ ಪಿಲಿಂಗಲ್ಲು, ಸಂಚಾಲಕ ರಾಮಚಂದ್ರ ಭಟ್ ಉಪ್ಪಂಗಳ ಪಾಲ್ಗೊಂಡು ವಿವರಗಳನ್ನು ನೀಡಿದರು.
ಕಾರ್ಯಕ್ರಮಗಳ ವಿವರ :
ಮಾರ್ಚ್ 14ರಂದು ಬದಿಯಡ್ಕ ಶ್ರೀ ಗಣೇಶಮಂದಿರ (ಜಿ.ಕೆ.ಭಟ್ ನಗರ)ದಲ್ಲಿ ಬೆಳಗ್ಗೆ 10.30ಕ್ಕೆ ಕಾಸರಗೋಡು ಶಾಸಕ ಎನ್.ಎ.ನೆಲ್ಲಿಕುನ್ನು ಉದ್ಘಾಟಿಸಲಿರುವರು. ಸಂಘಾಟಕ ಸಮಿತಿಯ ಅಧ್ಯಕ್ಷ, ಬದಿಯಡ್ಕ ಗ್ರಾಮಪಂಚಾಯತ್ ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್ ಸಭೆಯ ಅಧ್ಯಕ್ಷತೆಯನ್ನು ವಹಿಸಲಿರುವರು. ಕಾಸರಗೋಡು ಜಿಲ್ಲಾಧಿಕಾರಿ ಡಾ| ಡಿ.ಸಜಿತ್ ಬಾಬು ಮುಖ್ಯ ಅತಿಥಿಗಳಾಗಿ, ಜಿಲ್ಲಾಪಂಚಾಯತ್ ಕ್ಷೇಮಾಭಿವೃದ್ಧಿ ಖಾಯಂ ಸಮಿತಿ ಸದಸ್ಯೆ ನ್ಯಾಯವಾದಿ ಎ.ಪಿ.ಉಷಾ ಸಮ್ಮೇಳನದ ವಿಶೇಷ ಪುರವಣಿಯನ್ನು ಜಿಲ್ಲಾಧ್ಯಕ್ಷ ಟಿ.ಅಬೂಬಕ್ಕರ್ ಹಾಜಿಯವರಿಗೆ ನೀಡಿ ಬಿಡುಗಡೆಗೊಳಿಸಲಿರುವರು. ಜಿಲ್ಲಾಪಂಚಾಯತ್ ಸದಸ್ಯ ನ್ಯಾಯವಾದಿ ಕೆ.ಶ್ರೀಕಾಂತ್, ಬ್ಲೋಕ್ ಪಂಚಾಯತ್ ಸದಸ್ಯರುಗಳಾದ ಎ.ಎಸ್.ಅಹಮ್ಮದ್, ಅವಿನಾಶ್ ರೈ, ಶುಭಾಶಂಸನೆಗೈಯಲಿರುವರು.
12 ಘಂಟೆಗೆ ನಡೆಯುವ ವಯೋಜನ ಮಹಿಳಾ ಸಮ್ಮೇಳನವನ್ನು ರಾಜ್ಯ ಕಾರ್ಯದರ್ಶಿ ಜೋರ್ಜ್ ವರ್ಗೀಸ್ ಅಧ್ಯಕ್ಷತೆಯಲ್ಲಿ ಉದುಮ ಶಾಸಕ ಕೆ.ಕುಂಞÂರಾಮನ್ ಉದ್ಘಾಟಿಸಲಿರುವರು. ಈ ಸಂದರ್ಭದಲ್ಲಿ ಐದು ಮಂದಿ ಹಿರಿಯ ನಾಗರಿಕರನ್ನು ಜಿಲ್ಲಾಪಂಚಾಯತ್ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ ಸನ್ಮಾನಿಸಲಿರುವರು. ಸಾಯಿರಾಂ ಗೋಪಾಲಕೃಷ್ಣ ಭಟ್, ಡಾ| ಮೋಹನ್ ಕುಮಾರ್, ಬಾಬು ಎಂ.ಪಿ., ಚಿಂಡ ಪೊತುವಾಳ್, ಪಿ.ಬಾಲಕೃಷ್ಣನ್ ನಾಯರ್ ಸನ್ಮಾನವನ್ನು ಸ್ವೀಕರಿಸಲಿರುವರು. ಬಾಬು ಮಾಸ್ತರ್ ಪರಿಚಯಿಸಲಿರುವರು. ಜಿಲ್ಲಾಪಂಚಾಯತ್ ಸದಸ್ಯೆ ಇ.ಪದ್ಮಾವತಿ, ಮಾಹಿನ್ ಕೇಳೋಟ್, ಮಧುಕರ ರೈ, ಎಸ್.ಎನ್.ಮಯ್ಯ, ವಸಂತ ಪೈ ಬದಿಯಡ್ಕ, ರಾಧಾಕೃಷ್ಣ ಕೆ.ಉಳಿಯತ್ತಡ್ಕ ಶುಭಾಶಂಸನೆಗೈಯಲಿರುವರು.
ನಂತರ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿರುವುದು. ಅಪರಾಹ್ನ 2.30ಕ್ಕೆ ಜಿಲ್ಲಾ ಕೌನ್ಸಿಲ್ ಸಭೆಯನ್ನು ಕೆ.ಎಸ್.ಸಿ.ಎಫ್. ರಾಜ್ಯ ಅಧ್ಯಕ್ಷ ವಿ.ಸಿ.ಚಂದ್ರನ್ ಉದ್ಘಾಟಿಸಲಿರುವರು. ಜಿಲ್ಲಾ ಅಧ್ಯಕ್ಷ ಟಿ.ಅಬೂಬಕ್ಕರ್ ಹಾಜಿ ಅಧ್ಯಕ್ಷತೆಯಲ್ಲಿ ಜಿಲ್ಲಾ ಕಾರ್ಯದರ್ಶಿ ಕೆ.ಸುಕುಮಾರ್ ಮಾಸ್ತರ್ ವರದಿ, ಕೋಶಾಧಿಕಾರಿ ಕೆ.ಮುರುಗಪ್ಪನ್ ಆಚಾರಿ ಲೆಕ್ಕಪತ್ರ ಮಂಡಿಸಲಿದ್ದಾರೆ. ಜಿಲ್ಲಾ ಉಪಾಧ್ಯಕ್ಷ ಕೆ.ಜೆ.ಅಗಸ್ಟಿನ್ ಕರಾರು ಮಂಡನೆ ನಡೆಸಲಿದ್ದಾರೆ. ಜಿಲ್ಲಾ ಕೌನ್ಸಿಲ್ ಸದಸ್ಯರ ಸಮಗ್ರ ಚರ್ಚೆಯ ನಂತರ ಜಿಲ್ಲಾ ಕಾರ್ಯದರ್ಶಿ ಮತ್ತು ರಾಜ್ಯ ಕಾರ್ಯದರ್ಶಿ ಜೋರ್ಜ್ ವರ್ಗೀಸ್ ಮಾತನಾಡಲಿದ್ದಾರೆ. ಜಿಲ್ಲಾ ಜತೆಕಾರ್ಯದರ್ಶಿ ಪಿ.ಪಿ.ಜನಾರ್ಧನನ್ ನಾಯರ್ ಕರಾರು ಮಂಡಿಸಲಿದ್ದಾರೆ. ಜಿಲ್ಲಾ ಜೊತೆಕಾರ್ಯದರ್ಶಿ ಪಿ.ಕೆ.ಅಬ್ದುಲ್ ರಹಿಮಾನ್ ಮಾಸ್ತರ್ ಸ್ವಾಗತಿಸಿ, ರತ್ನಾಕರನ್ ಪಿಲಾತ್ತಡ ವಂದಿಸುವರು.
ಕನ್ನಡ ಪ್ರದೇಶಕ್ಕೆ ಸಂಘಟನೆಯ ಸಂದೇಶವನ್ನು ತಲುಪಿಸುವ ಪ್ರಧಾನ ಉದ್ದೇಶವನ್ನಿಟ್ಟುಕೊಂಡು ನಡೆಸಲಾಗುವ ಸಮ್ಮೇಳನವನ್ನು ಯಶಸ್ವಿಗೊಳಿಸಬೇಕೆಂದು ವಿನಂತಿಸಿಕೊಳ್ಳಲಾಗಿದೆ.




