ಸಮಕಾಲೀನ ಕನ್ನಡ ಸಾಹಿತ್ಯ- ವಿಚಾರ ಸಂಕಿರಣ ಮಾ.21 ರಿಂದ
0
ಮಾರ್ಚ್ 12, 2019
ಕಾಸರಗೋಡು: ಕಣ್ಣೂರು ವಿಶ್ವವಿದ್ಯಾಲಯ, ಭಾರತೀಯ ಭಾಷಾ ಅಧ್ಯಯನಾಂಗದ ಕನ್ನಡ ವಿಭಾಗದ ವತಿಯಿಂದ ಮಾರ್ಚ್ 21ರಿಂದ 23 ರ ವರೆಗೆ "ಸಮಕಾಲೀನ ಕನ್ನಡ ಸಾಹಿತ್ಯ" ವಿಷಯದಲ್ಲಿ ಮೂರು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣ ವಿದ್ಯಾನಗರದ ಚಾಲದಲ್ಲಿರುವ ವಿವಿ ಅಧ್ಯಯನಾಂಗದಲ್ಲಿ ಏರ್ಪಡಿಸಿದೆ.
ಕಣ್ಣೂರು ವಿಶ್ವವಿದ್ಯಾಲಯ ಸಿಂಡಿಕೇಟ್ ಸದಸ್ಯ ಡಾ. ವಿಪಿಪಿ ಮುಸ್ತಾಫ ಅವರು ಮಾ.21 ರಂದು ಬೆಳಿಗ್ಗೆ 10ಕ್ಕೆ ವಿಚಾರ ಸಂಕಿರಣ ಉದ್ಘಾಟಿಸುವರು. ಕಣ್ಣೂರು ವಿವಿ ಭಾಷಾ ವಿಭಾಗದ ಡೀನ್ ಡಾ ಎ.ಎಂ ಶ್ರೀಧರನ್, ನಿವೃತ್ತ ಪ್ರಾಧ್ಯಾಪಕ ಡಾ.ಪಿ ಶ್ರೀಕೃಷ್ಣ ಭಟ್, ಡಾ.ಯು. ಮಹೇಶ್ವರಿ, ಮಂಜೇಶ್ವರದ ಗೋವಿಂದ ಪೈ ಸ್ಮಾರಕ ಸರಕಾರಿ ಕಾಲೇಜು ಕನ್ನಡ ವಿಭಾಗ ಮುಖ್ಯಸ್ಥೆ ಅಮಿತಾ ಎಸ್, ಕಾಸರಗೋಡು ಸರಕಾರಿ ಕಾಲೇಜು ಕನ್ನಡ ವಿಭಾಗ ಮುಖ್ಯಸ್ಥೆ ಸುಜಾತ.ಎಸ್ ಶುಭ ಹಾರೈಸುವರು.
ಖ್ಯಾತ ಕಥೆಗಾರ ಹಾಗೂ ವಿಮರ್ಶಕ ಡಾ.ಜನಾರ್ದನ ಭಟ್ ದಿಕ್ಸೂಚಿ ಭಾಷಣ ಮಾಡುವರು. ಡಾ. ಧನಂಜಯ ಕುಂಬಳೆ, ಡಾ.ಗೋನಾಳ್ ಲಿಂಗಪ್ಪ, ಡಾ.ರತ್ನಾಕರ ಮಲ್ಲಮೂಲೆ,ಡಾ.ರಘುನಂದನ್, ಡಾ.ಹಳೆಮನೆ ರಾಜಶೇಖರ್, ಡಾ. ಸೀತಾಲಕ್ಷ್ಮಿ ಕರ್ಕಿಕೋಡಿ, ಸೌಮ್ಯ.ಪಿ ವಿವಿಧ ವಿಷಯಗಳಲ್ಲಿ ಪ್ರಬಂಧ ಮಂಡಿಸುವರು. ಮೂರನೆಯ ದಿನ ನಡೆಯುವ ಚರ್ಚಾ ಗೋಷ್ಡಿಯಲ್ಲಿ ಡಾ ರಾಧಾಕೃಷ್ಣ ಬೆಳ್ಳೂರು, ಡಾ.ಯು.ಮಹೇಶ್ವರಿ, ಡಾ.ವರದರಾಜ ಚಂದ್ರಗಿರಿ ಭಾಗವಹಿಸುವರು. ಮುಂಬೈ ವಿಶ್ವವಿದ್ಯಾಲಯ ನಿವೃತ್ತ ಪ್ರಾಧ್ಯಾಪಕ ಡಾ.ತಾಳ್ತಜೆ ವಸಂತ ಕುಮಾರ್ ಸಮಾರೋಪ ಮಾತುಗಳನ್ನಾಡುವರು ಎಂದು ನಿರ್ದೇಶಕ ಡಾ.ರಾಜೇಶ್ ಬೆಜ್ಜಂಗಳ ತಿಳಿಸಿದ್ದಾರೆ.




