ಆರಿಕ್ಕಾಡಿ ಧೂಮಾವತಿ ದೈವಸ್ಥಾನದಲ್ಲಿ ನಾಗಪ್ರತಿಷ್ಠೆ, ಕಲಶಾಭಿಷೇಕ, ನೇಮೋತ್ಸವ ಮಾ.21,22 ರಂದು
0
ಮಾರ್ಚ್ 11, 2019
ಕುಂಬಳೆ: ಆರಿಕ್ಕಾಡಿ ಧೂಮಾವತಿ ದೈವಸ್ಥಾನದಲ್ಲಿ ಮಾ.12 ಮತ್ತು 13 ರಂದು ಬ್ರಹ್ಮಶ್ರೀ ಯೋಗೀಶ್ ಕಡಮಣ್ಣಾಯ ನೇತೃತ್ವದಲ್ಲಿ ನಾಗಪ್ರತಿಷ್ಟೆ, ಕಲಶಾಭಿಷೇಕ ಹಾಗೂ ಮಾ.21 ಮತ್ತು 22 ರಂದು ಕಾಲಾವಧಿ ನೇಮೋತ್ಸವ ವಿವಿಧ ವೈದಿಕ, ಧಾರ್ಮಿಕ ಮತ್ತು ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ.
ಮಾ.13 ರಂದು ಬೆಳಿಗ್ಗೆ 7.10 ಕ್ಕೆ ನಾಗಪ್ರತಿಷ್ಠೆ, 9.30 ರಿಂದ ಸರ್ಪಬಲಿ ನಡೆಯಲಿದೆ. 11 ರಿಂದ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಗೋಪಾಲ ಶೆಟ್ಟಿ ಅರಿಬೈಲು ವಹಿಸಲಿದ್ದಾರೆ. ದೀಪ ಪ್ರಜ್ವಲನೆಯನ್ನು ಉದ್ಯಾವರ ಮಾಡ ಅಣ್ಣ ದೈವದ ಪಾತ್ರಿ ರಾಜ ಬೆಳ್ಚಪ್ಪಾಡ ನಡೆಸುವರು. ಆಶೀರ್ವಚನವನ್ನು ಧೂಮಾವತಿ ದೈವಸ್ಥಾನದ ತಂತ್ರಿವರ್ಯರಾದ ಬ್ರಹ್ಮಶ್ರೀ ಯೋಗೀಶ್ ಕಡಮಣ್ಣಾ ನಡೇಸಲಿದ್ದಾರೆ. ಕೆಡೆಂಜಿ ಮಹಾವಿಷ್ಣು ಕ್ಷೇತ್ರದ ಮೊಕ್ತೇಸರ ವಸಂತ ಪೈ ಬದಿಯಡ್ಕ ಗೌರವ ಉಪಸ್ಥಿತಿ ವಹಿಸಲಿರುವರು.
ಮುಖ್ಯ ಅತಿಥಿಗಳಾಗಿ ಶಾಸ್ತಾರೇಶ್ವರ ದೇವಸ್ಥಾನ ಕುಬಣೂರು ಇದರ ಗೌರವಾಧ್ಯಕ್ಷ ಅಶೋಕ್ ಕುಮಾರ್ ಹೊಳ್ಳ, ಧಾರ್ಮಿಕ ಮುಂದಾಳು ವೀರಪ್ಪ ಆಂಬಾರು, ಕೇರಳ ಕನ್ನಡ ಸಾಹಿತ್ಯ ಸಂಗಮ ಮಂಜೇಶ್ವರ ಇದರ ಅಧ್ಯಕ್ಷರಾದ ಹರೀಶ್ ಸುಲಾಯ ಒಡ್ಡಂಬೆಟ್ಟು, ಸುರತ್ಕಲ್ ಪೆÇಲೀಸ್ ಠಾಣೆಯ ಸಬ್ ಇನ್ಸ್‍ಪೆಕ್ಟರ್ ಎಚ್. ಪೂವಪ್ಪ, ಜೈ ಶ್ರೀರಾಮ್ ಸಮಾಜಸೇವಾ ಸಂಸ್ಥೆಯ ಗೌರವ ಸಲಹೆಗಾರ ನ್ಯಾಯವಾದಿ ನವೀನ್ ರಾಜ್, ಕುಂಬಳೆ ಗ್ರಾಮ ಪಂಚಾಯತಿ ಮಾಜಿ ಉಪಾಧ್ಯಕ್ಷ ಮಂಜುನಾಥ ಆಳ್ವ, ಕೃಷ್ಣಪ್ಪ ಕೋರಿಕ್ಕಾರ್ ಮೇಗಿನಮನೆ, ದಯಾಕರ ಮಾಡ, ಶಿವಾನಂದ ಮಂಗಲ್ಪಾಡಿ, ರಾಮಚಂದ್ರ ಗಟ್ಟಿ, ನ್ಯಾಯವಾದಿ ಬಾಲಕೃಷ್ಣ ಶೆಟ್ಟಿ, ಐತಪ್ಪ ಆರಿಕ್ಕಾಡಿ, ಸುರೇಶ್ ಬೆಳ್ಚಪ್ಪಾಡ, ರಾಮಪ್ಪ ಮಂಜೇಶ್ವರ, ನಾರಾಯಣ ಹೆಗ್ಡೆ ಕೋಡಿಬೈಲು, ಕೃಷ್ಣಪ್ಪ ಪೂಜಾರಿ ಜೋಡುಕಲ್ಲು, ಶ್ರೀಧರ ಶೆಟ್ಟಿ ಮುಟ್ಟಂ, ಮೀರಾ ಆಳ್ವ, ಸುಮಂಗಲ ಶಿವದಾಸ್ ಪೆÇಸೋಟು,ದಿನೇಶ್ ಕುಳೂರು ಉಪಸ್ಥಿತರಿರುವರು. ಮಧ್ಯಾಹ್ನ 12.30 ಕ್ಕೆ ಅನ್ನಸಂತರ್ಪಣೆ ನಡೆಯಲಿದೆ.




