HEALTH TIPS

22ರಂದು ವಿಶ್ವಜಲ ದಿನಾಚರಣೆ

ಕಾಸರಗೋಡು: "ಜಲ ಜೀವನಂ-ಅತಿಜೀವನತ್ತಿನ್ (ಜಲಜೀವನ-ಪರಿಹಾರಕ್ಕೆ)" ಎಂಬ ಯೋಜನೆ ಪ್ರಕಾರ ಹರಿತ ಕೇರಳಂ ಮಿಷನ್ ನೇತೃತ್ವದಲ್ಲಿ ವಿವಿಧ ಜಲಸಂರಕ್ಷಣೆ ಚಟುವಟಿಕೆಗಳು ನಡೆದುಬರುತ್ತಿವೆ. ಇದರ ಅಂಗವಾಗಿ ಮಾ.22ರಂದು "ಒಂದೊಂದು ನೀರಹನಿಯನ್ನೂ ಸಂರಕ್ಷಿಸೋಣ" ಎಂಬ ಸಂದೇಶದೊಂದಿಗೆ ಜಿಲ್ಲೆಯಲ್ಲಿ ವಿಶ್ವಜಲದಿನ ಆಚರಣೆ ನಡೆಸಲಾಗುವುದು. ಯೋಜನೆಯ ಅಂಗವಾಗಿಜಿಲ್ಲೆಯ ಎಲ್ಲ ಸರಕಾರಿ ಸಂಸ್ಥೇಗಳಲ್ಲಿ , ಶಿಕ್ಷಣಾಲಯಗಳಲ್ಲಿ ಜಲಸಂರಕ್ಷಣೆ ಚಟುವಟಿಕೆಗಳನ್ನು, ಜನಜಾಗೃತಿ ಚಟುವಟಿಕೆಗಳನ್ನು ,ಜಲಸಂರಕ್ಷಣೆ ಪ್ರತಿಜ್ಞೆ ಇತ್ಯಾದಿ ವಿವಿಧ ಕಾರ್ಯಕ್ರಮನಡೆಸಲಾಗುವುದು. ನೀರಿನ ಬಳಕೆ ಮತ್ತು ನಿಯಂತ್ರಣ, ಮಳೆ ನೀರು ಸಂಗ್ರಹ, ಜಲಾಶಯಗಳ ಸಂರಕ್ಷಣೆ ಇತ್ಯಾದಿ ನಡೆಯಲಿದ್ದು, ಸಾರ್ವಜನಿಕರು ಈ ಯೋಜನೆಗಳಿಗೆ ಸಹಕಾರ ನೀಡುವಂತೆ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ವಿನಂತಿಸಿರುವರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries