ತೂಕ ವಂಚನೆ ಕಂಡುಬಂದಲ್ಲಿ ದೂರು ನೀಡಲು ಸಿದ್ಧವಾಗಿದೆ "ಸುಧಾರ್ಯ" ಆಫ್
0
ಮಾರ್ಚ್ 17, 2019
ಕಾಸರಗೋಡು: ಗ್ರಾಹಕರಿಗೆ ವಸ್ತುಗಳ ಖರೀದಿಯ ವೇಳೆ ತೂಕ ಮಾಪನದಲ್ಲಿ ವಂಚನೆಯಾಗುತ್ತಿದೆ ಎಂಬ ದೂರು ದಶಕಗಳಿಂದ ಕೇಳಿಬರುತ್ತಿದೆ. ಈ ನಿಟ್ಟಿನಲ್ಲಿ ತೂಕ ಮಾಪನದ ಅಕ್ರಮ ತಡೆಯುವ ನಿಟ್ಟಿನಲ್ಲಿ"ಸುಧಾರ್ಯ" ಮೊಬೈಲ್ ಆಪ್ ಸಿದ್ಧವಾಗಿದೆ.
ಲೀಗಲ್ ಮೆಟ್ರಾಲಜಿ ಇಲಾಖೆ ಈ ಮೊಬೈಲ್ ???ಪ್ ಸಿದ್ಧಪಡಿಸಿದೆ. ಅಳತೆಯಲ್ಲಿ ಅಕ್ರಮನಡೆಸಿದರೆ ಈ ಮೂಲಕ ದೂರು ನೀಡಬಹುದಾಗಿದೆ.
ಗ್ರಾಹಕರು ಬಹಳ ಸುಲಭವಾಗಿ ಮಾರುಕಟ್ಟೆಯಲ್ಲಿ ನಡೆಯುವ ಶೋಷಣೆ ವಿರುದ್ಧ ದೂರು ನೀಡಬಹುದಾಗಿದೆ. ಈ ಆಪ್ ಪ್ಲೇ ಸ್ಟೋರ್ ನಿಂದ ಡೌನ್ ಲೋಡ್ ನಡೆಸಿ ಬಳಸಬಹುದಾಗಿದೆ. ಈ ಮೂಲಕನೀಡುವ ಎಲ್ಲ ದೂರುಗಳಿಗೂ ಪರಿಹಾರ ಲಭಿಸಲಿದೆ.
ವ್ಯಾಪಾರಿಗಳು ಬಳಸು ತ್ರಾಸು ಸಹಿತ ಅಳತೆ ಮಾಪಕಗಳನ್ನು ಲೀಗಲ್ ಮೆಟ್ರಾಲಜಿ ವಿಭಾಗದ ತಪಾಸಣೆಗೊಳಪಡಿಸಿ ಸೀಲ್ ಮಾಡಬೇಕು. ಕಾನೂನು ಪ್ರಕಾರವಲ್ಲದ ಅಳತೆ ಮಾಪಕ ಬಳಸುವುದಿದ್ದಲ್ಲಿ ಗ್ರಾಹಕ ಅಧಿಕಾರಿಗಳ ಗಮನಕ್ಕೆ ತರಬೇಕು. ತ್ರಾಸುಗಳನ್ನು ಕೈಯಯಲ್ಲಿ ಹಿಡಿದು ಅಳತೆ ಮಾಡುವ ಕ್ರಮಕ್ಕೆ ಒಪ್ಪಿಗೆ ನೀಡಬಾರದು. ಗ್ರಾಹಕನಿಗೆ ಕಾಣದೆ ಇರುವ ಜಾಗದಲ್ಲಿ ತ್ರಾಸು ಸ್ಥಾಪಿಸಲಾಗಿದೆಯೇ ಎಂದು ಗಮನಿಸಬೇಕು. ಅಳತೆಯಲ್ಲಿ ವ್ಯತ್ಯಾಸ ಕಂಡುಬಂದಲ್ಲಿ ಅಧಿಕಾರಿಗಳಿಗೆ ದೂರು ನೀಡಬೇಕು. ಆಟೋರಿಕ್ಷಾದಲ್ಲಿ ಫೇರ್ ಮೀಟರ್ ಚಟುವಟಿಕೆ ನಡೆಸುತ್ತಿದೆಯೇ ಎಂದು ಗಮನಿಸಬೇಕು. ಚಿನ್ನದ ಆಭರಣ ಖರೀದಿ ಬಿಲ್ ನಲ್ಲಿ ಕ್ಯಾರೆಟ್ ದಾಖಲಿಸಿ ಅದರ ಪ್ರಕಾರದ ಬೆಲೆ ನಮೂದಿಸುವಂತೆ ಗಮನಿಸಬೇಕು. ಮೇಲೆ ತಿಳಿಸಿದ ಯಾವುದೇ ವಿಚಾರಗಳಲ್ಲಿ ವ್ಯತ್ಯಾಸಗಳಿದ್ದರೆ ಗ್ರಾಹಕ ದೂರುನೀಡಬಹುದಾಗಿದೆ.
ಮರಳು, ಗ್ರಾನೈಟ್, ಲೋಹ ಇತ್ಯಾದಿಗಳ ಗಾತ್ರ, ತೂಕ, ವಿಸ್ತೀರ್ಣ ಇತ್ಯಾದಿಗಳ ಹಿನ್ನೆಲೆಯಲ್ಲಿ ಬೆಲೆ ನಿಗದಿ ಪಡಿಸಬೇಕು. ಪೆಟ್ರೋಲ್ಪಂಪ್ ಗಳಲ್ಲಿ ಆಯಾ ಡೆಲಿವರಿಗೆ ಮುನ್ನ ಝೀರೋ ಡಿಸ್ ಪ್ಲೇ ಖಚಿತಪಡಿಸಬೇಕು. ಪೆಟ್ರೋಲ್ ಪಂಪ್ ಗಳಲ್ಲಿ ಪ್ರಮಾಣ ಅಳತೆ ಮಾಡುವ 5 ಲೀಟರ್ ಅಳತೆ ಪಾತ್ರೆಯೊಂದು ಇರಿಸಲಾಗುತ್ತದೆ. ಅಳತೆಯಲ್ಲಿ ಅಕ್ರಮವಿರುವುದಾಗಿ ಸಂಶಯಗಳಿದ್ದಲ್ಲಿ ಗ್ರಾಹಕ ಈ ಪಾತ್ರೆ ಮೂಲಕ ಅಳತೆ ಮಾಡುವಂತೆ ಪಂಪ್ ಮಾಲೀಕನಲ್ಲಿ ಆಗ್ರಹಿಸಬಹುದಾಗಿದೆ.
ಪ್ಯಾಕೆಟ್ ಸಾಮಾಗ್ರಿ ಮಾರಾಟ ನಡೆಸುವಲ್ಲಿ ಕೆಳಗಡೆ ನಮೂದಿಸಲಾದ ಲೇಬಲ್ ಗಳಲ್ಲಿ ಸಮಗ್ರ ಮಾಹಿತಿ ನೀಡಲಾಗಿದೆಯೇ ಎಂದು ಗಮನಿಸಬೇಕು. ನಿರ್ಮಾಪಕನ, ಪ್ಯಾಕ್ ನಡೆಸಿದವರ, ರವಾನೆ ನಡೆಸಿದವರ, ಹೆಸರು, ಪೂರ್ಣವಿಳಾಸ, ಪ್ಯಾಕೆಟ್ ನಲ್ಲಿರುವ ಸಾಮಾಗ್ರಿಯ ತೂಕ, ಪ್ರಮಾಣ, ಬೆಲೆ ಇತ್ಯಾದಿ ಇದೆಯೇ ಎಂದು ಗಮನಿಸಬೇಕು. ಎಂ.ಆರ್.ಪಿ. ಗಿಂತ ಅಧಿಕ ಬೆಲೆ ಈಡು ಮಾಡುವುದು ಅಪರಾಧ. ಇಂಥಹ ಅಕ್ರಮಗಳವಿರುದ್ಧ ಸುಧಾರ್ಯ ಆಪ್ ಮೂಲಕ ದೂರು ನೀಡಬಹುದಾಗಿದೆ.

