ಚುನಾವಣೆ: ಮತದಾರರ ಶಾಂತಿ ಸಮಾಧಾನಕ್ಕೆ ತಡೆಯಾಗಬಾರದು- ಜಿಲ್ಲಾಧಿಕಾರಿ
0
ಮಾರ್ಚ್ 17, 2019
ಕಾಸರಗೋಡು: ಲೋಕಸಭೆ ಚುನಾವಣೆಗೆ ಸಂಬಂಧಿಸಿ ಮತದಾರರ ಶಾಂತಿ ಸಮಾಧಾನದ ಬದುಕಿಗೆ ತಡೆಯುಂಟುಮಾಡುವ ರೀತಿಯ ಚಟುವಟಿಕೆಗಳನ್ನು ರಾಜಕೀಯ ಪಕ್ಷಗಳೋ, ಅಭ್ಯರ್ಥಿಗಳೋ ನಡೆಸಕೂಡದು ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿರುವರು.
ಯಾವುದೇ ವ್ಯಕ್ತಿ, ಸಂಸ್ಥೆಯ ಮಾಲೀಕತ್ವದಲ್ಲಿರುವ ಕಟ್ಟಡ, ಜಾಗ, ಆವರಣಗೋಡೆಗಳಲ್ಲಿ ಅವರ ಅನುಮತಿ, ಮಾಹಿತಿಯಿಲ್ಲದೆ ಪ್ರಚಾರ ಸಾಮಾಗ್ರಿ ಪ್ರದರ್ಶನ ನಡೆಸಕೂಡದು ಎಂದವರು ಆದೇಶಿಸಿದರು. ಖಾಸಗಿವ್ಯಕ್ತಿಯ ಜಾಗದಲ್ಲಿ ಅನುಮತಿಯಿಲ್ಲದೆ ಧ್ವಜಸ್ತಂಭ ಸ್ಥಾಪಿಸುವುದು, ಬ್ಯಾನರ್ ಕಟ್ಟುವುದು , ಪ್ರಚಾರ ಫಲಕ ಸ್ಥಾಪಿಸುವುದು ನಡೆಸಕೂಡದು. ಚುನಾವಣೆ ಸಾರ್ವವಜನಿಕ ಸಭೆಗಳನ್ನು ನಡೆಸುವಲ್ಲೂ ಈ ಆದೇಶಗಳು ಅನ್ವಯವಾಗುತ್ತವೆ. ಈ ಆದೇಶ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದ್ದಾರೆ.

