ಡೆಂಟಲ್ ಪದವಿಯಲ್ಲಿ 8 ನೇ ರ್ಯಾಂಕ್ ಗಳಿಸಿದ ಧನ್ಯಶ್ರೀ ಕೆ.ಬಿ.
0
ಮಾರ್ಚ್ 15, 2019
ಕುಂಬಳೆ: ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾನಿಲಯ ನಡೆಸಿದ 2018 ನೇ ವರ್ಷದ ದಂತ ವೈದ್ಯಕೀಯ ಪದವಿ ವಿಭಾಗದಲ್ಲಿ ಕಾಸರಗೋಡು ಕುಂಬಳೆಯ ಧನ್ಯಶ್ರೀ ಕೆ.ಬಿ. 8 ನೇ ರ್ಯಾಂಕ್ ಗಳಿಸಿದ್ದಾರೆ.
ಸುಳ್ಯ ಕೆ.ವಿ.ಜಿ. ಡೆಂಟಲ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ ಇವರು ಕನ್ನಡ ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ಭಾಸ್ಕರ ಕಾಸರಗೋಡು ಮತ್ತು ಗೀತಾ ದಂಪತಿಯ ಪುತ್ರಿಯಾಗಿದ್ದಾಳೆ. ಒಂದನೇ ತರಗತಿಯಿಂದ ಹತ್ತನೇ ತರಗತಿ ತನಕ ಮೆಡೋನಾ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಹಾಗು ಬಿ.ಇ.ಎಂ. ಹೈಸ್ಕೂಲ್, ನಂತರ ಪ್ಲಸ್ ಟು ಎಡನೀರು ಸ್ವಾಮೀಜೀಸ್ ಹೈಸ್ಕೂಲಿನಲ್ಲಿ ವಿದ್ಯಾಭ್ಯಾಸವನ್ನು ಕನ್ನಡ ಮಾಧ್ಯಮದಲ್ಲಿ ಪಡೆದಿದ್ದರು.

