ನಲ್ಕ ಶಾಲೆಯಲ್ಲಿ ಮಹಿಳಾ ದಿನಾಚರಣೆ
0
ಮಾರ್ಚ್ 15, 2019
ಪೆರ್ಲ: ನಲ್ಕ ವಾಗ್ದೇವಿ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮಹಿಳಾ ದಿನಾಚರಣೆಯ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಭರತನಾಟ್ಯ - ಯಕ್ಷಗಾನ ಕಲಾವಿದೆ, ಲೇಖಕಿ, ಕೊಡಗಿನ ಗೌರಮ್ಮ ಪ್ರಶಸ್ತಿ ವಿಜೇತೆ ವಿದುಶಿಃ ಅನುಪಮಾ ರಾಘವೇಂದ್ರ ಉಡುಪುಮೂಲೆಯವರನ್ನು ಶಾಲು ಹೊದೆಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ನಲ್ಕ ಶಾಲೆಯ ನಿವೃತ್ತ ಪ್ರಾಧ್ಯಾಪಕಿ, ಸಾಹಿತಿ ಪಾರ್ವತಿ ಕೈಲಾಸ ಹಾಗೂ ಶಾಲಾ ಮಾತೃಸಂಘದ ಅಧ್ಯಕ್ಷೆ ವಿನೋದ ಕಲ್ಲುಕುಟ್ಟಿಮೂಲೆ ಇವರನ್ನೂ ಈ ಸಂದರ್ಭದಲ್ಲಿ ಗೌರವಿಸಲಾಯಿತು. ಹೆಣ್ಣು ಮಕ್ಕಳು ಕೂಡಾ ಶಿಕ್ಷಣವನ್ನು ಪಡೆದು ಸಂಸಾರವನ್ನು ಚಂದದಿಂದ ನಿಭಾಯಿಸುವ ಸಾಮಥ್ರ್ಯವನ್ನು ಗಳಿಸುವಂತಾಗಬೇಕು ಎಂಬ ಕಿವಿಮಾತನ್ನು ಅನುಪಮಾ ರಾಘವೇಂದ್ರ ವ್ಯಕ್ತಪಡಿಸಿದರು. ಶಾಲಾ ಮಕ್ಕಳ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಶಾಲಾ ಮುಖ್ಯೋಪಾಧ್ಯಾಯ ಶ್ರೀಪತಿ .ಎನ್.ಸ್ವಾಗತಿಸಿ, ನಳಿನಿ ಟೀಚರ್ ವಂದಿಸಿದರು. ಶಾಲಾ ಮಕ್ಕಳ ಪೋಷಕರು ಉಪಸ್ಥಿತರಿದ್ದರು.




