ಬಂಟರ ಸಮ್ಮಿಲನ-ಆಮಂತ್ರಣ ಪತ್ರಿಕೆ ಬಿಡುಗಡೆ
0
ಮಾರ್ಚ್ 14, 2019
ಬದಿಯಡ್ಕ: ಬದಿಯಡ್ಕ ಪಂಚಾಯತಿ ಬಂಟರ ಸಂಘ ಮತ್ತು ಮಾತೃಸಂಘದ ಆಶ್ರಯದಲ್ಲಿ ಏ.7 ರಂದು ಪೆರಡಾಲದ ನವಜೀವನ ಹೈಯರ್ ಸೆಕೆಂಡರಿ ಶಾಲಾ ಸಭಾಂಗಣದಲ್ಲಿ ಬಂಟರ ಸಮ್ಮಿಲನ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಹಿನ್ನೆಲೆಯಲ್ಲಿ ಸಮಾರಂಭದ ಆಮಂತ್ರಣ ಪತ್ರಿಕೆಯನ್ನು ಇತ್ತೀಚೆಗೆ ಬಂಟರ ಸಂಘದ ಕಚೇರಿಯಲ್ಲಿ ಬಿಡುಗಡೆಗೊಳಿಸಲಾಯಿತು. ಈ ಸಂದರ್ಭ ಇತ್ತೀಚೆಗೆ ನಿಧನರಾದ ಸಂಘದ ಮಾಜೀ ಅಧ್ಯಕ್ಷ ಜಗನ್ನಾಥ ಆಳ್ವ ಮೂಲಡ್ಕ ಮತ್ತು ಸದಸ್ಯ ನೇಮಿರಾಜ ರೈ ಪೆರಡಾಲಗುತ್ತು ಇವರಿಗೆ ಸಭೆಯಲ್ಲಿ ಶ್ರದ್ದಾಂಜಲಿ ಸಲ್ಲಿಸಲಾಯಿತು.
ಬಂಟರಸಂಘದ ಜಿಲ್ಲಾ ಕೋಶಾಧಿಕಾರಿ ಚಂದ್ರಹಾಸ ರೈ ಪೆರಡಾಲಗುತ್ತು, ಕುಂಬಳೆ ಫಿರ್ಕಾ ಬಂಟರ ಸಂಘದ ಅಧ್ಯಕ್ಷ ರವೀಂದ್ರನಾಥ ಶೆಟ್ಟಿ ವಳಮಲೆ ನುಡಿನಮನ ಸಲ್ಲಿಸಿದರು. ರವೀಂದ್ರನಾಥ ಶೆಟ್ಟಿ ವಳಮಲೆ ಅಧ್ಯಕ್ಷತೆ ವಹಿಸಿದ್ದರು. ಫಿರ್ಕಾ ಕಾರ್ಯದರ್ಶಿ ಅಶೋಕ ರೈ ಕೊರೆಕ್ಕಾನ, ಜಗನ್ನಾಥ ರೈ ಕೊರೆಕ್ಕಾನ ಉಪಸ್ಥಿತರಿದ್ದರು. ನಿರಂಜನ ರೈ ಪೆರಡಾಲ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ದಯಾನಂದ ರೈ ಬದಿಯಡ್ಕ ವಂದಿಸಿದರು.




