ಮೀಂಜ ಗ್ರಾಮ ಪಂಚಾಯತಿ ಕಚೇರಿಗೆ ಜಾಥಾ
0
ಮಾರ್ಚ್ 15, 2019
ಮಂಜೇಶ್ವರ: ಎನ್.ಆರ್.ಇ.ಜಿ. ವರ್ಕರ್ಸ್ ಯೂನಿಯನ್ ಮೀಂಜ ಪಂಚಾಯತಿ ಸಮಿತಿ ವತಿಯಿಂದ ಮೀಂಜ ಗ್ರಾಮ ಪಂಚಾಯತಿ ಕಚೇರಿ ಮುಂಭಾಗದಲ್ಲಿ ಜಾಥಾ ಹಾಗು ಧರಣಿ ಬುಧವಾರ ನಡೆಯಿತು.
ಕಾರ್ಮಿಕರ ಬಾಕಿ ಇದ್ದ ವೇತನ ಕೂಡಲೇ ವಿತರಿಸಬೇಕು, 2018-19 ನೇ ವರ್ಷದಲ್ಲಿ ಭರವಸೆ ನೀಡಿದ 150 ದಿನದ ಕೆಲಸವನ್ನು ಕಾಸರಗೋಡು ಜಿಲ್ಲೆಯ ಕಾರ್ಮಿಕರಿಗೆ ನೀಡಬೇಕು, ಕೇಂದ್ರ ಸರಕಾರವು ಕೇರಳದ ಕಾರ್ಮಿಕರಿಗೆ ಕೂಲಿಯಾಗಿ ನೀಡಲು ಬಾಕಿಯಿರುವ 700 ಕೋಟಿ ರೂ. ಕೂಡಲೇ ನೀಡಬೇಕು, ಉದ್ಯೋಗ ಖಾತರಿ ಯೋಜನೆಯನ್ನು ಸಂರಕ್ಷಿಸಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಧರಣಿ ನಡೆಸಲಾಯಿತು.
ಧರಣಿಯ ಉದ್ಘಾಟನೆಯನ್ನು ಸಿಐಟಿಯು ಕಾಸರಗೋಡು ಜಿಲ್ಲಾ ಸಮಿತಿ ಉಪಾಧ್ಯಕ್ಷೆ ಬೇಬಿ ಶೆಟ್ಟಿ ನೆರವೇರಿಸಿದರು. ಸತ್ಯಪ್ರಭಾ ಕಳಿಯೂರು ಅಧ್ಯಕ್ಷತೆ ವಹಿಸಿದರು.
ಐರಿನ್ ಜೋಸಿನ್, ಸುಚಿತ್ರ, ಸರಸ್ವತಿ ಧರಣಿಗೆ ನೇತೃತ್ವ ವಹಿಸಿದ್ದರು. ಯೂನಿಯನ್‍ನ ಪಂಚಾಯತಿ ಕಾರ್ಯದರ್ಶಿ ಜಗನ್ನಾಥ ಮಜಿಬೈಲು ಸ್ವಾಗತಿಸಿ, ಸುಚಿತ್ರ ಶೆಟ್ಟಿ ವಂದಿಸಿದರು.




