ಅಡೂರು ಜಾತ್ರೆ- ಹಸಿರುವಾಣಿ ಮೆರವಣಿಗೆ
0
ಮಾರ್ಚ್ 15, 2019
ಮುಳ್ಳೇರಿಯ: ಇತಿಹಾಸ ಪ್ರಸಿದ್ಧ ಅಡೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ಮಹಾವಿಷ್ಣು ವಿನಾಯಕ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರೋತ್ಸವದಂಗವಾಗಿ ವಿವಿಧ ಪ್ರಾದೇಶಿಕ ಸಮಿತಿಗಳ ಸಹಭಾಗಿತ್ವದಲ್ಲಿ ಹಸಿರುವಾಣಿ ಮೆರವಣಿಗೆ ಮಂಗಳವಾರ ಶ್ರೀಕ್ಷೇತ್ರಕ್ಕೆ ಆಗಮಿಸಿತು.
ಕ್ಷೇತ್ರದ ಮುಂಭಾಗ ಜೀರ್ಣೋದ್ಧಾ ಸಮಿತಿ ಹಾಗೂ ಜಾತ್ರೋತ್ಸವ ಸಮಿತಿ ಪ್ರಮುಖರಾದ ಎ.ಗೋಪಾಲ ಮಣಿಯಾಣಿ ಅಡೂರು, ರಾಮಚಂದ್ರ ಮಣಿಯಾಣಿ, ಬೆಳ್ಳಿಪ್ಪಾಡಿ ಸದಾಶಿವ ರೈ, ಅಶೋಕ ನಾೈಕ್ ಪಾಂಡಿ, ಗಂಗಾಧರ ಮಾಸ್ತರ್ ಅಡೂರು, ಪ್ರಮೀಳ ಸಿ.ನಾೈಕ್, ರಾಮ ನಾೈಕ್ ಅಡೂರು, ವಸಂತ ಗೌಡ ಮೂಡೂರು, ಕಾಂತಡ್ಕ ಗಂಗಾಧರ ರಾವ್ ಮೊದಲಾದವರು ಮೆರವಣಿಗೆಯನ್ನು ಸ್ವಾಗತಿಸಿ ಬರಮಾಡಿಕೊಂಡರು. ಸಿಂಗಾರಿ ಮೇಳದ ಚೆಂಡೆ ವಾದನ ಸಂಭ್ರಮದಿಂದ ಮೆರವಣಿಗೆಗೆ ಮೆರುಗು ನೀಡಿತು.




