ಪೆರ್ಲ:ಕಜಂಪಾಡಿ ಸರಕಾರಿ ಅಭ್ಯುದಯ ಕಿರಿಯ ಪ್ರಾಥಮಿಕ ಶಾಲೆಗೆ ಗ್ರಾ.ಪಂ. ಸದಸ್ಯೆ ರೂಪವಾಣಿ ಆರ್.ಭಟ್ ಅವರ ಅನುದಾನದಿಂದ ಮಂಜೂರಾದ ಕುಡಿನೀರು ಯೋಜನೆಗೆ ಇತ್ತೀಚೆಗೆ ಚಾಲನೆ ನೀಡಲಾಯಿತು. ಗ್ರಾ.ಪಂ.ಸದಸ್ಯೆ ರೂಪವಾಣಿ ಆರ್.ಭಟ್, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಚಂದ್ರಶೇಖರ ಕಜಂಪಾಡಿ, ಅಭಿವೃದ್ಧಿ ಸಮಿತಿ ಪದಾಧಿಕಾರಿಗಳಾದ ದಯಾನಂದ ಕುಲಾಲ್, ಸತ್ಯಶಂಕರ ಭಟ್, ಶಾಲಾ ಶಿಕ್ಷಕ ವೃಂದ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
