ಮೃತ್ಯುಂಜಯೇಶ್ವರ ದೇವಾಲಯದಲ್ಲಿ ಮೌನ ನಾಮಜಪ ಯಜ್ಞ ಇಂದು ಆರನೇ ದಿನ
0
ಮಾರ್ಚ್ 09, 2019
ಮಂಜೇಶ್ವರ: ಪಾವೂರು ಕೊಪ್ಪಳ ಶಿವಪುರದ ಮಹಾ ಮೃತ್ಯುಂಜಯೇಶ್ವರ ದೇವಸ್ಥಾನದಲ್ಲಿ ಮಾರ್ಚ್ 4 ರಿಂದ ಯೋಗಾಚಾರ್ಯ ಪುಂಡರೀಕಾಕ್ಷ ಬೆಳ್ಳೂರು ನೇತೃತ್ವದಲ್ಲಿ ಹಮ್ಮಿಕೊಳ್ಳಲಾದ 48 ದಿನಗಳ ಉದಯಾಸ್ತಮಾನ ಮೌನ ನಾಮಜಪದ ನಾಲ್ಕನೇ ದಿನವಾದ ಗುರುವಾರ ಬೆಳಿಗ್ಗೆ ಗಣಪತಿ ಹವನ, ಬಳಿಕ ಪುಂಡರೀಕಾಕ್ಷ ಅವರಿಂದ ಮೌನ ನಾಮ ಜಪ ನಡೆಯಿತು. ಈ ಸಂದರ್ಭ ಉಪಸ್ಥಿತರಿದ್ದ ನೂರಾರು ಸಂಖ್ಯೆಯ ಭಕ್ತರಿಂದ ಸಾವಿರ ಸಂಖ್ಯೆಯಲ್ಲಿ ನಾಮ ಜಪ ನಡೆಯಿತು. ಸಂಜೆ ಮಹಾವಿಷ್ಣು ಭಜನಾ ತಂಡ ದೇವಂಡಪಡ್ಪು ಇವರು ಭಜನಾ ಸಂಕೀರ್ತನೆ ನಡೆಸಿದರು. ಸಂಜೆ 6.30 ಕ್ಕೆ ಪುಂಡರೀಕಾಕ್ಷ ರಿಂದ ಸತ್ಸಂಗ ನಡೆಯಿತು. ಈ ಸಂದರ್ಭದಲ್ಲಿ ಅತಿಥಿಗಳಾಗಿ ಐತಪ್ಪ ಶೆಟ್ಟಿ ದೇವಂದ ಪಡ್ಪು, ಮಾಧವ ಶೆಟ್ಟಿ ಬಡಾಜೆ, ಶಶಿಕಲಾ ಟೀಚರ್ ದೇವಂದಪಡ್ಪು,ಸುಬ್ಬ ಗುರುಸ್ವಾಮಿ ಪಾವೂರು, ಗೋಪಾಲ ಶೆಟ್ಟಿ ಅರಿಬೈಲು, ಶಾಂಭ ನಾಯ್ಕ,ಬಾಲಕೃಷ್ಣ ಶೆಟ್ಟಿ ಮುಗೇರ್ ಗುತ್ತು ಭಾಗವಹಿಸಿದ್ದರು. ಕುಶಾಲಾಕ್ಷಿ ಕಾರ್ಯಕ್ರಮ ನಿರ್ವಹಿಸಿದರು.
ಐದನೇ ದಿನವಾದ ನಿನ್ನೆ ಬೆಳಿಗ್ಗೆ ಗಣಪತಿ ಹವನದ ಬಳಿಕ ಯೋಗಾಚಾರ್ಯರಿಂದ ಮೌನ ನಾಮ ಜಪ ನೂರಕ್ಕಿಂತ ಹೆಚ್ಚು ಬಾರಿ ನೆರವೇರಿತು. ಭಕ್ತರಿಂದ ಸಾವಿರ ಸಂಖ್ಯೆಯಲ್ಲಿ ನಾಮ ಜಪ ನಡೆಯಿತು. ಶ್ರೀ ಉಮಾ ಭಗವತಿ ಭಜನಾ ಮಂಡಳಿ ಪಚ್ಲಂಪಾರೆ ಉಪ್ಪಳ ಭಜನಾ ತಂಡದಿಂದ ಸಂಕೀರ್ತನೆ ನಡೆಯಿತು. ಸಂಜೆ 6.30 ಕೆ ಪುಂಡರೀಕಾಕ್ಷರಿಂದ ಸತ್ಸಂಗ ನಡೆಯಿತು. ಈ ಸಂದರ್ಭದಲ್ಲಿ ಅತಿಥಿಗಳಾಗಿ ಬಾಲಕೃಷ್ಣ ಕುಂಜತ್ತೂರು, ಹರೀಶ್ ಕನ್ನಿಗುಳಿ. ಸುಬ್ಬ ಗುರುಸ್ವಾಮಿ ಪಾವೂರು,ಗೋಪಾಲ ಶೆಟ್ಟಿ ಅರಿಬೈಲು, ಮರುಗೇಶ್ ಪಚ್ಲಂಪಾರೆ ಭಾಗವಹಿಸಿದರು. ಕುಶಾಲಾಕ್ಷಿ ಕಾನದಕಟ್ಟ ಕಾರ್ಯಕ್ರಮ ನಿರ್ವಹಿಸಿದರು.




