ಸ್ವಪ್ನ ಸಂತೋಷ್ ಸಾಧನೆಗೆ ಸಂದ ಗೌರವ-ಕ್ಯಾಲಿಪೋರ್ನಿಯಾಕ್ಕೆ ಅಧ್ಯಯನಕ್ಕಾಗಿ ಅವಕಾಶ
0
ಮಾರ್ಚ್ 12, 2019
ಕ್ಯಾಲಿಪೋರ್ನಿಯಾದಲ್ಲಿ ಅಧ್ಯಯನಕ್ಕೆ ಸ್ವಪ್ನಾ ಸಂತೋಷ್
ಕುಂಬಳೆ: ಜಿಡ್ಡು ಕೃಷ್ಣಮೂರ್ತಿ ಫೌಂಡೇಶನ್ ವತಿಯಿಂದ ನಡೆಸಲ್ಪಡುವ ಬೆಂಗಳೂರಿನ ದ ವ್ಯಾಲಿ ಶಾಲೆಯಲ್ಲಿ 17 ವರ್ಷಗಳಿಂದ ಶಿಕ್ಷಕಿಯಾಗಿರುವ ಸ್ವಪ್ನಾ ಸಂತೋಷ್ ಅಮೆರಿಕ ಕ್ಯಾಲಿಫೋರ್ನಿಯಾದಲ್ಲಿರುವ ’ಕೆ’ ಸ್ಕೂಲ್‌ಗೆ ಹೆಚ್ಚಿನ ಅಧ್ಯಯನಕ್ಕಾಗಿ ಏಪ್ರಿಲ್‌ನಲ್ಲಿ ತೆರಳಲಿದ್ದಾರೆ. ಶೈಕ್ಷಣಿಕ ಹಾಗೂ ಶಿಕ್ಷಣೇತರ ನೆಲೆಗಳಲ್ಲಿ, ಕಲೆ- ಸಾಂಸ್ಕೃತಿಕ ಚಟುವಟಿಗೆಗಳಲ್ಲಿ ಹಾಗು ಜಿಡ್ಡು ಸಾಹಿತ್ಯದ ಪ್ರಸರಣದಲ್ಲೂ ಸ್ವಪ್ನಾ ಅಪಾರ ಕೊಡುಗೆ ನೀಡಿದ್ದಾರೆ. ಇದು ಶಿಕ್ಷಣ ಕ್ಷೇತ್ರದಲ್ಲಿ ಅವರು ಸಲ್ಲಿಸಿದ ಅಪೂರ್ವ ಸಾಧನೆಗೆ ಸಂದ ಗೌರವವಾಗಿದೆ. ಇವರು ಸಾಹಿತಿ ಕೃಷ್ಣಯ್ಯ ಅನಂತಪುರ ಹಾಗೂ ಜಯಶ್ರೀ ಅನಂತಪುರ ಅವರ ಸೊಸೆ ಮತ್ತು ಸಂತೋಷ್ ಅನಂತಪುರ ಅವರ ಪತ್ನಿ. ಯು.ಆರ್. ಗುರುರಾಜಮೂರ್ತಿ ಮತ್ತು ಭಾಗ್ಯಲಕ್ಷ್ಮಿದಂಪತಿ ಪುತ್ರಿ.




