ಮಂಜೇಶ್ವರದಲ್ಲಿ ಮಹಿಳಾ ದಿನಾಚರಣೆ
0
ಮಾರ್ಚ್ 09, 2019
ಮಂಜೇಶ್ವರ: ಮಂಜೇಶ್ವರ ಸಹಾಯಕ ಐ.ಸಿ.ಡಿ.ಎಸ್. ಯೋಜನೆ ಕಾರ್ಯಾಲಯ ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಶುಕ್ರವಾರ ಜರುಗಿತು.
ಕಾರ್ಯಕ್ರಮ ಅಂಗವಾಗಿ ಸಂದೇಶ ಯಾತ್ರೆ ನಡೆಯಿತು. ಸಭಾ ಕಾರ್ಯಕ್ರಮವನ್ನು ಪುತ್ತಿಗೆ ಗ್ರಾಮಪಂಚಾಯತಿ ಅಧ್ಯಕ್ಷೆ ಜೆ.ಆರ್.ಅರುಣ ಉದ್ಘಾಟಿಸಿದರು. ಎಣ್ಮಕಜೆ ಗ್ರಾಮಪಂಚಾಯತಿ ಕಲ್ಯಾಣ ಸ್ಥಾಯೀ ಸಮಿತಿ ಅಧ್ಯಕ್ಷೆ ಚಂದ್ರಾವತಿ ಅಧ್ಯಕ್ಷತೆ ವಹಿಸಿದ್ದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ನಡೆಸಿದ ವಿಮಲಾ ಮಂಗಲ್ಪಾಡಿ, ಯೋಗಿನಿಯಮ್ಮ ಎಣ್ಮಕಜೆ, ಲಕ್ಷ್ಮಿ ಪುತ್ತಿಗೆ ಎಂಬವರನ್ನು ಅಭಿನಂದಿಸಲಾಯಿತು. ಪುತ್ತಿಗೆ ಗ್ರಾಮಪಂಚಾಯತಿ ಸದಸ್ಯ ಇ.ಕೆ.ಕುಂಞÂಮಹಮ್ಮದ್, ಶಿಶು ಕಲ್ಯಾಣ ಅಧಿಕಾರಿ ಕೆ.ರೇಖಾ, ಸಿ.ಎ.ಸಾಬಿರ್, ಅಂಬಿಕಾ ಟಿ.ಪಿ., ಸುಮತಿ ಸಿ., ರಾಜೇಶ್ವರಿ ಎ.ಬಿ., ಗೀತಾ ಕೆ., ಉಷಾ ಎಂ.ಎಸ್. ಮೊದಲಾದವರು ಉಪಸ್ಥಿತರಿದ್ದರು.




