ಕೃಷಿ ನೀರಾವರಿಗೆ ನಿಯಂತ್ರಣ!
0
ಮಾರ್ಚ್ 17, 2019
ಕಾಸರಗೋಡು: ಜಿಲ್ಲೆಯಲ್ಲಿ ಕುಡಿಯುವನೀರಿನ ಬರ ಹೆಚ್ಚಳಗೊಂಡಿರುವ ಹಿನ್ನೆಲೆಯಲ್ಲಿ ಕೃಷಿ ನೀರಾವರಿಗೆ ನಿಯಂತ್ರಣ ಹೇರಲಾಗಿದೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ನಡೆದ ಕೃಷಿಕರ ಸಂಘಟನೆ, ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.
ಜಿಲ್ಲೆಯ ಬಾವಿ,ಕೆರೆ ಸಹಿತ ಜಲಾಶಯಗಳಲ್ಲಿ ನೀರಿನ ಪ್ರಮಾಣ ಗಣನೀಯವಾಗಿ ಕೆಳಮುಖವಾಗಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ತೆಂಗು, ಅಡಕೆ ಇತ್ಯಾದಿ ತೋಟಗಳಿಗೆ ಬೆಳಗ್ಗೆ 6 ರಿಂದ 9 ಗಂಟೆ ವರೆಗೆ ಮಾತ್ರ ನೀರು ಸಿಂಪಡಣೆ ನಡೆಸಬೇಕು. ಭತ್ತ ಮತ್ತು ತರಕಾರಿ ಕೃಷಿಗೆ ಈ ನಿಯಂತ್ರಣ ಅನ್ವಯವಲ್ಲ. ಕೃಷಿ ಅಗತ್ಯದ ಹೆಸರಲ್ಲಿ ನೀರು ಪಂಪಿಂಗ್ ನಡೆಸಿ ದುರುಪಯೋಗ ನಡೆಸಬಾರದು. ಈ ನಿಟ್ಟಿನಲ್ಲಿ ಪಂಚಾಯತ್ ಮಟ್ಟದಲ್ಲಿ ಕೃಷಿಕರಿಗೆ ಜಾಗೃತಿ ತರಗತಿನಡೆಸಲಾಗುವುದು.
ನಿರ್ಮಾಣ ಕಾಮಗಾರಿಗಳಿಗೆ ನದಿ, ಸಾರ್ವಜನಿಕ ,ಖಾಸಗಿ ಬಾವಿ,ಕೆರೆ ಇತ್ಯಾದಿಗಳಿಂದ ನೀರೆತ್ತಬಾರದು. ಕೃಷಿ ಅಗತ್ಯದ ಹೆಸರಲ್ಲಿ ಜಲ-ವಿದ್ಯುತ್ ದುರುಪಯೋಗ ನಡೆಸಕೂಡದು. ಕೃಷಿ-ನೀರಾವರಿ-ವಿದ್ಯುತ್ ಇಲಾಖೆಗಳು ಜಂಟಿಯಾಗಿ ಈ ಸಂಬಂಧ ತಪಾಸಣೆ ನಡೆಸಲಿದ್ದಾರೆ.
ಅಕ್ರಮ ಮರಳು ಹೂಳೆತ್ತುವಿಕೆ ನೀರಿನಪ್ರಮಾಣ ಕಡಿಮೆಯಾಗಲು ಪ್ರಧಾನಕಾರಣವಾಗಿದ್ದು, ಕಂದಾಯ-ಪೊಲೀಸ್ ಇಲಾಖೆ ಜಂಟಿಯಾಗಿ ಕಾರ್ಯಾಚರಣೆ ನಡೆಸಲಿವೆ.
ನದಿಗಳಿಂದ ಕುಡಿಯುವ ನೀರು ಪಂಪಿಂಗ್ ನಡೆಸುತ್ತಿದ್ದರೆ ಅಂಥ ಕಡೆಯಲ್ಲಿ 500 ಮೀಟರ್ ಕೆಲಗಡೆ ಮತ್ತು ಮೇಲ್ಗಡೆ ಕೃಷಿ ಅಗತ್ಯಗಳಿಗೆ ನೀರೆತ್ತಬಾರದು ಎಂಬ ನಿಯಂತ್ರಣವನ್ನು ಕೈಬಿಡಲಾಗಿದೆ.
ಕೋಟಿಗಟ್ಟಲೆ ರೂ.ವೆಚ್ಚದಲ್ಲಿ ಅನೇಕ ವರ್ಷಗಳ ಮುನ್ನ ನಿರ್ಮಾಣನಡೆಸಿದ ಅನೇಕ ಯೋಜನೆಗಳು ಅನುಷ್ಠಾನಗೊಳ್ಳದಿರುವ ಬಗ್ಗೆ , ಅಲ್ಲಿ ನಡೆದಿರುವಬೃಷ್ಟಾಚಾರಗಳಬಗ್ಗೆ ತನಿಖೆ ನಡೆಸುವಂತೆ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಸಂಬಂಧಪಟ್ಟಧಿಕಾರಿಗಳಿಗೆ ಆದೇಶ ನೀಡಿದರು.
ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳೂ, ಕೃಷಿಕ ಸಂಘಟನೆ ಪ್ರತಿನಿಧಿಗಳೂ ಉಪಸ್ಥಿತರಿದ್ದರು.

