HEALTH TIPS

ಚುನಾವಣೆ ನೀತಿಸಂಹಿತೆ ಜಾರಿಗೆ- ಜಾತಿ-ಮತ-ಭಾಷೆ ಹಿನ್ನೆಲೆಯಲ್ಲಿ ದ್ವೇಷ ಹುಟ್ಟಿಸುವ ವರ್ತನೆ ಸಲ್ಲದು: ಜಿಲ್ಲಾಧಿಕಾರಿ

ಕಾಸರಗೋಡು: ಚುನಾವಣೆ ಸಂಬಂಧ ಮಾದರಿ ನೀತಿಸಂಹಿತೆ ಜಾರಿಗೆ ಬಂದಿರುವ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಜಾತಿ-ಮತ-ಭಾಷೆ ಹಿನ್ನೆಲೆಯಲ್ಲಿ ಜನತೆಯ ನಡುವೆ ದ್ವೇಷ ಹುಟ್ಟಿಸುವಂಥಾ ರೀತಿ ವರ್ತಿಸಬಾರದು ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದರು. ಜಾತಿ-ಮತಗಳ ಹೆಸರಲ್ಲಿ ಮತಯಾಚನೆ ನಡೆಸುವುದು, ಮತಯಾಚನೆಗೆ ಆರಾಧನಾಯಲಗಳ ಬಳಕೆ ನಡೆಸಕೂಡದು. ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಮತದಾರರನ್ನುಬೆದರಿಸಿ, ಆಮಿಷವೊಡ್ಡಿ ತಮ್ಮಕಡೆ ಸೆಳೆಯಕೂಡದು. ಒಬ್ಬರ ಬದಲಿಗೆ ಇನ್ನೊಬ್ಬರನ್ನು ಬಳಸಿ ಮತದಾನನಡೆಸುವುದು, ಮತಗಟ್ಟೆಯ 100 ಮೀಟರ್ ವ್ಯಾಪ್ತಿಯಲ್ಲಿ ಮತದಾದ ದಿನ ಪ್ರಚಾರ ನಡೆಸುವುದು, ಮತದಾನಕ್ಕೆ 48 ತಾಸು ಮುನ್ನ, ಚುನಾವಣೆಯ ಪ್ರಚಾರ ಮುಗಿದ ನಂತರ, ಮತದಾನ ಮುಗಿಯುವ ಮುನ್ನ, ಸಾರ್ವಜನಿಕ ಸಭೆ ನಡೆಸುವುದು ಇತ್ಯಾದಿ ಮಾದರಿ ನೀತಿಸಂಹಿತೆಯ ಉಲ್ಲಂಘನೆಯಾಗಿದೆ ಎಂದವರು ನುಡಿದರು. ಯಾವ ನಾಗರೀಕನ ಸಮಾಧಾನಕರ ಬದುಕಿನಲ್ಲಿ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಹಸ್ತಕ್ಷೇಪ ನಡೆಸಕೂಡದು. ಯಾವುದೇ ವ್ಯಕ್ತಿಯ, ಸಂಸ್ಥೆಯ ಸ್ವಾಮ್ಯದ ಕಟ್ಟಡ, ಜಾ, ಆಸ್ತಿಯಲ್ಲಿ ಸಂಬಂಧಪಟ್ಟವರ ಒಪ್ಪಿಗೆ, ಮಾಹಿತಿಯಿಲಲದೆ ಪ್ರಚಾರ ಸಾಮಾಗ್ರಿ ಬಳಸಕೂಡದು ಎಂದವರು ಹೇಳಿದರು. ಪ್ರತಿಪಕ್ಷದ ಅಭ್ಯರ್ಥಿ ನಡೆಸುವ ಪ್ರಚಾರ ಚಟುವಟಿಕೆಗಳಿಗೆ ತಡೆಯುಂಟುಮಾಡುವುದು, ಅವರ ಪ್ರಚಾರ ಸಾಮಾಗ್ರಿಗಳಿಗೆ ಹಾನಿ ಮಾಡುವುದು ಇತ್ಯಾದಿ ಮಾದರಿ ನೀತಿಸಂಹಿತೆಯ ಉಲ್ಲಂಘಟನೆ ಎಂದು ತಿಳಿಸಿದರು. ಅಭ್ಯರ್ಥಿಗಳು ಚುನಾವಣೆ ಸಭೆ, ವಾಹನ ಪ್ರಚಾರ ಇತ್ಯಾದಿ ನಡೆಸುವ ವೇಳೆ ಸಂಬಂಧ ಪಟ್ಟ ಅಧಿಕಾರಿಗಳಿಂದ ಲಿಖಿತ ಅನುಮತಿ ಪಡೆಯಬೇಕು. ಧ್ವನಿವರ್ಧಕ ಬಳಸಿ ನಡೆಸುವ ಪ್ರಚಾರ ರಾತ್ರಿ 10ರಿಂದ ಬೆಳಗ್ಗೆ 6 ಗಂಟೆ ವರೆಗಿನ ಅವಧಿಯಲ್ಲಿ ಅನುಮತಿ ರಹಿತವಾಗಿದೆ. ಸರಕಾರಿಸಂಸ್ಥೆಗಳು, ಸರಕಾರಿ ಕಾರ್ಯಕ್ರಮಗಳು ಚುನಾವಣೆ ಪ್ರಚಾರಕ್ಕಾಗಿ ಬಳಸಕೂಡದು. ಸರಕಾರಿ, ಸಾರ್ವಜನಿಕ ಸಂಸ್ಥೆಗಳಲ್ಲಿ, ಸಾರ್ವಜನಿಕ ಪ್ರದೇಶಗಳಲ್ಲಿ ಪ್ರಚಾರ ಸಾಮಾಗ್ರಿಗಳ ಬಳಕೆ ನಡೆಸಕೂಡದು. ಏ.23ರಂದು ನಡೆಯುವ ಮತದಾನ ಸಂಬಂಧ ಮಾ.28 ರಂದು ಗಝೆಟೆಡ್ ಆದೇಶ ಹೊರಡಿಸಲಾಗುವುದು. ನಾಮಪತ್ರ ಸಲ್ಲಿಕೆಗೆ ಕೊನೆಯ ದಿನಾಂಕ ಏ.4, ಸೂಕ್ಷ್ಮ ತಪಾಸಣೆ ಏ.5ರಂದು, ನಾಮಪತ್ರ ಹಿಂತೆಗೆತಕ್ಕೆ ಕೊನೆಯ ದಿನಾಂಕ ಏ.8 ಆಗಿದೆ. ಜಿಲ್ಲೆಯಲ್ಲಿ ಸುಗಮ, ನೀತಿ ಪೂರ್ವಕ ಚುನಾವಣೆ ನಡೆಸುವ ನಿಟ್ಟಿನಲ್ಲಿ ನೀತಿಸಂಹಿತೆ ಜಾರಿಗೊಳಿಸುವ ಸಂಬಂಧ ವಿಧಾನಸಭೆ ಕ್ಷೇತ್ರ ಮಟ್ಟದಲ್ಲಿ ಪೊಲೀಸ್ ಸಂರಕ್ಷಣೆ ಸಹಿತದ ವೀಡಿಯೋ ಚಿತ್ರೀಕರಣ ಸಹಿತದ 5 ಏಂಟಿ ಡಿ ಫೇಸ್ ಮೆಂಟ್ ಸ್ಕ್ವಾಡ್ ಗಳು, ಜಿಲ್ಲಾಮಟ್ಟದಲ್ಲಿ ಒಂದು ಸ್ಕ್ವಾಡ್ ರಚನೆಯಾಗಿದೆ. ಸ್ಕ್ವಾಡ್ ಗಳ ಚಟುವಟಿಕೆ ಏಕೀಕರಣಗೊಳಿಸುವ ನಿಟ್ಟಿನಲ್ಲಿ , ನಿರೀಕ್ಷಿಸುವ ನಿಟ್ಟಿನಲ್ಲಿ, ಆದೇಶ ನೀಡುವ ಉದ್ದೇಶದಿಂದ ಜಿಲ್ಲಾ ಮಟ್ಟದ ಅಧಿಕಾರಿಯೊಬ್ಬರನ್ನು ನೇಮಿಸಲಾಗಿದೆ. ಚುನವಣೆ ನೀತಿಸಂಹಿತೆ ಸಂಬಂಧ ಚಟುವಟಿಕೆಗಳ ಒಟ್ಟು ಹೊಣೆ ಹೆಚ್ಚುವರಿ ದಂಡನಾಧಿಕಾರಿ ಅವರಿಗೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries