HEALTH TIPS

ಪೈವಳಿಕೆ ಕಳಪೆ ಜಲನಿಧಿ ಯೋಜನೆ: ಜಿಲ್ಲಾಧಿಕಾರಿಯಿಂದ ಅವಲೋಕನ ಸಭೆ

ಉಪ್ಪಳ : ಕೇಂದ್ರ ರಾಜ್ಯ ಸರಕಾರಗಳ ಮತ್ತು ಫಲಾನುಭವಿಗಳ ಪಾಲಿನೊಂದಿಗೆ ಪೈವಳಿಕೆ ಗ್ರಾಮ ಪಂಚಾಯತಿನಲ್ಲಿ ನಿರ್ವಹಿಸಿದ ಕಳಪೆ ಕಾಮಗಾರಿ ಜಲನಿಧಿ ಯೋಜನೆಯ ಅವಲೋಕನಾ ಸಭೆಯು ಗ್ರಾಮಪಂಚಾಯತ್ ಸಭಾಭವನದಲ್ಲಿ ಇತ್ತೀಚೆಗೆ ಜರಗಿತು. ಕಾಸರಗೋಡು ಜಿಲ್ಲಾಧಿಕಾರಿ ಡಾ.ಸಜಿತ್‍ಬಾಬು ಸಭೆಯಲ್ಲಿ ಭಾಗವಹಿಸಿ ಕುಡಿಯುವ ನೀರಿನ ಫಲಾನುಭವಿಗಳ ದೂರನ್ನು ಆಲಿಸಿದರು. ಗ್ರಾಮ ಪಂಚಾಯತಿನ ಪೆÇನ್ನೆಂಗಳ,ಪೆರ್ವಡಿ,ಪರಪ್ಪು,ಗಾಳಿಯಡ್ಕ,ಚಿಪ್ಪಾರುಪದವು,ಕುಡಾಲು,ಬೆರಿಪದವು,ಕುರುಡಪದವು,ಪೈವಳಿಕೆ,ಪೆರ್ಮುದೆ,ಪೆÇಸಡಿಗುಂಪೆ ಮತ್ತು ಬದಿಯಾರು ಎಂಬ 12 ಕೇಂದ್ರಗಳಲ್ಲಿ ಕಳೆದ 2012 ರಲ್ಲಿ ಯೋಜನೆಯನ್ನು ಕೈಗೊಳ್ಳಲಾಗಿದೆ.ಒಟ್ಟು ಸುಮಾರು 10 ಕೋಟಿ 50 ಲಕ್ಷ ವೆಚ್ಚದ ಬೃಹತ್ ಯೋಜನೆಯಲ್ಲಿ 2,372 ಮನೆಗಳಿಗೆ ನೀರುಣಿಸುವ ಯೋಜನೆಯಾಗಿದೆ.ಆದರೆ ಕೇವಲ ಒಂದೆರಡು ಕಡೆಗಳಲ್ಲಿ ಯೋಜನೆ ಸಫಲವಾಗಿದ್ದರೂ ಉಳಿದ ಕಡೆಗಳಲ್ಲಿ ವಿಫಲವಾಗಿದೆ.ಕಳಪೆ ಕಾಮಗಾರಿಗಳಿಂದ ಹೆಚ್ಚಿನ ಕಡೆಗಳಲ್ಲಿ ಕೆಲವು ದಿನ ನೀರು ಹರಿದು ಬಳಿಕ ಸ್ಥಗಿತಗೊಂಡಿದೆ.ಕೆಲವು ಕಡೆಗಳಲ್ಲಿ ಯೋಜನೆ ಇನ್ನೂ ಪೂರ್ತಿಗೊಂಡಿಲ್ಲ.ಆದರೆ ಯೋಜನೆಯ ಹೆಚ್ಚಿನ ಬಿಲ್ ಮಾತ್ರ ಪಾವತಿಯಾಗಿದೆ. ಸಭೆಯಲ್ಲಿ ಭಾಗವಹಿಸಿದ ಕುಡಿಯುವ ನೀರಿನ ಫಲಾನುಭವಿಗಳು ಕಳಪೆ ಯೋಜನೆಯ ಕುರಿತು ಜಿಲ್ಲಾ„ಕಾರಿಯವರಲ್ಲಿ ಅವಲತ್ತುಕೊಂಡರು.ದೂರನ್ನು ಆಲಿಸಿದ ಡಿ.ಸಿ.ಅವರು ಜಲನಿಧಿ ಯೋಜನೆಯ ಅಧಿಕಾರಿಗಳಿಗೆ ತಕ್ಷಣ ಕ್ರಮಕೈಗೊಳ್ಳಲು ಆದೇಶಿದರು.ಇದಕ್ಕೆ ಬೇಕಾದ ನಿಧಿಯನ್ನು ಮಂಜೂರು ಮಾಡುವುದಾಗಿ ಭರವಸೆ ನೀಡಿದರು.ಗ್ರಾಮ ಪಂಚಾಯತ್ ಅಧ್ಯಕ್ಷೆ ಭಾರತಿ ಶೆಟ್ಟಿ ಅಧ್ಯಕ್ಷತೆ ವಹಿಸಿದ ಸಭೆಯಲ್ಲಿ ಜಲನಿಧಿ ಅಧಿಕಾರಿಗಳು,ಗ್ರಾ.ಪಂ.ಸದಸ್ಯರು,ಮಾಜಿ ಅಧ್ಯಕ್ಷರು ಮತ್ತು ಮಾಜಿ ಸದಸ್ಯರು ವಿವಿಧ ರಾಜಕೀಯ ಪಕ್ಷಗಳ ನಾಯಕರು,ಕುಡಿಯು ನೀರಿನ ಫಲಾನುಭವಿ ಸಮತಿ ಪದಾಧಿಕಾರಿಗಳು ಭಾಗವಹಿಸಿದರು.ಹಿಂದಿನ ಆಡಳಿತ ಕಾಲದಲ್ಲಿ ಕೈಗೊಂಡ ಯೋಜನೆಯಲ್ಲಿ ಕಳಪೆ ಪೈಪ್ ಇನ್ನಿತರ ಉಪಕರಣಗಳ ಖರೀದಿ ಮತ್ತು ಆಳವಾಗಿ ಅಳವಡಿಸದ ಪೈಪ್‍ಗಳಿಂದ ಯೋಜನೆ ಅಪೂರ್ಣವಾಗಿತ್ತು.ಆದರೆ ಇಂದಿನ ಆಡಳಿತ ಕಳಪೆ ಕಾಮಗಾರಿಗೆ ಕೆಲವು ಸದಸ್ಯರ ವಿರೋಧದ ಮಧ್ಯೆಯೂ ಬಿಲ್ ನೀಡಿ ಯೋಜನೆಯ ಅವ್ಯವಹಾರಕ್ಕೆ ಪರೋಕ್ಷ ಬೆಂಬಲ ನೀಡಿರುವುದಾಗಿ ಫಲಾನುಭವಿಗಳ ಆರೋಪವಲ್ಲದೆ ಭ್ರಷ್ಟಾಚಾರಕ್ಕೆ ಯಾವುದೇ ರಾಜಕೀಯ ಪಕ್ಷದ ಆಡಳಿತ ಹೊರತಲ್ಲವೆಂಬ ದೂರು ಜಲನಿಧಿ ಫಲಾನುಭವಿಗಳಿಂದ ಕೇಳಿ ಬಂತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries