ಹವನ ಸಮಾರಂಭದ ಅಮಂತ್ರಣ ಪತ್ರಿಕೆ ಬಿಡುಗಡೆ
0
ಮಾರ್ಚ್ 11, 2019
ಉಪ್ಪಳ: ಗ್ರಾಮ ವಿಕಾಸ ಸಮಿತಿ ಪ್ರತಾಪನಗರ ಇದರ ಆಶ್ರಯದಲ್ಲಿ ಮಾರ್ಚ್ 30ರಂದು ಪ್ರತಾಪನಗರ ಶ್ರೀ ಗೌರೀ ಗಣೇಶ ಭಜನಾ ಮಂದಿರದಲ್ಲಿ ನಡೆಯಲಿರುವ ಐಕ್ಯ ಮತ್ಯ ಸೂಕ್ತ ಹವನ ಸಹಿತ ಸಗ್ರಹ ಶ್ರೀ ಶನೈಶ್ಚರ ಹವನದ ಆಮಂತ್ರಣ ಪತ್ರಿಕೆಯನ್ನು ಭಾನುವಾರ ಸಂಜೆ ಮಂದಿರದಲ್ಲಿ ಶೇಖರ ಪೂಜಾರಿ ಮಂಗಲ್ಪಾಡಿ ಬಿಡುಗಡೆಗೊಳಿಸಿದರು. ಗ್ರಾಮ ವಿಕಾಸ ಸಮಿತಿ, ಶ್ರೀ ಗೌರೀ ಗಣೇಶ ಭಜನಾ ಮಂದಿರ, ಶ್ರೀ ಗೌರೀಗಣೇಶ ಭಜನಾ ಸಮಿತಿ, ಗೌರೀ ಗಣೇಶ ಮಹಿಳಾ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.




