`ಪ್ರತಿಭಾನ್ವಿತರ ಬೆಳೆಸುವಲ್ಲಿ ಪ್ರಯತ್ನಶೀಲನಾಗಿರುತ್ತೇನೆ'-ಯುವ ಚಿತ್ರ ನಟ ಸಜೀಶ್ ರಂಜನ್
0
ಮಾರ್ಚ್ 11, 2019
ಕಾಸರಗೋಡು: ಪರಿಚಿತ ಆತ್ಮೀಯ ವಲಯದಲ್ಲಿ ಸಾಕಷ್ಟು ಪ್ರತಿಭೆಗಳಿದ್ದು, ಅನುಭವದಿಂದ ದೊರೆತ ವಿಚಾರಗಳ ಬಗ್ಗೆ ಸಲಹೆ-ಮಾರ್ಗದರ್ಶನ ನೀಡಿ ಪೆÇ್ರೀತ್ಸಾಹಿಸುವ ನಿಟ್ಟಿನಲ್ಲಿ ಸದಾ ಪ್ರಯತ್ನಶೀಲನಾಗಿರುತ್ತೇನೆ ಎಂದು ಕನ್ನಡ ಚಿತ್ರರಂಗದಲ್ಲಿ ವಿನೂತನ ದಾಖಲೆ ಬರೆದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಕೊಡುಗೆ ರಾಮಣ್ಣ ರೈ' ಚಿತ್ರದ ಯುವ ನಟ ಸಜೀಶ್ ರಂಜನ್ ಹೇಳಿದರು.
ಚಿತ್ತಾರಿ ಬಾರಿಕ್ಕಾಡು ಶ್ರೀ ಮಲ್ಲಿಕಾರ್ಜುನ ದೇವಳ ಮಹಿಳಾ ವೃಂದ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಚಿತ್ರದಲ್ಲಿ ರಿಷಬ್ ಶೆಟ್ಟಿ ಅವರು `ಶ್ರೀ ಮಂಜುನಾಥ'ನ ನಂಬುವ, ದೈವಕ ರೂಪ ಕಲ್ಪನೆಯ ಪಾತ್ರವೊಂದನ್ನು ಸೃಷ್ಟಿಸಿದ್ದರು. ಅದಕ್ಕೆ ಪೂರಕವೆಂಬಂತೆ ಶ್ರೀ ಮಂಜುನಾಥ ಸ್ವಾಮಿಯ ಪ್ರತಿರೂಪವೇ ಆಗಿರುವ ಕುಲದೇವರಾದ ಶ್ರೀ ಮಲ್ಲಿಕಾರ್ಜುನ ಸ್ವಾಮಿಯ ಸಾನ್ನಿಧ್ಯದಲ್ಲಿ ದೊರೆತ ಪುರಸ್ಕಾರವನ್ನು ಭಗವಂತನ ವರಪ್ರಸಾದವೆಂದು ಭಾವಿಸಿದ್ದೇನೆ ಎನ್ನುತ್ತಿದ್ದಂತೆ ಅವರು ಭಾವುಕರಾದರು.
ಮೈಸೂರಿನ ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಕಾನೂನು ಮಹಾವಿದ್ಯಾಲಯದ ಪ್ರಾಂಶುಪಾಲರಾದ ಸಾಯಿನಾಥ್ ಮಲ್ಲಿಗೆಮಾಡು ಮುಖ್ಯ ಅತಿಥಿಯಾಗಿದ್ದರು. ವಿಜಯ ಡಿ.ರಾವ್ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದರು. ಮಹಿಳಾ ವೃಂದದ ಪರವಾಗಿ ಸಜೀಶ್ ರಂಜನ್ ಅವರಿಗೆ ಶಾಲು ಹೊದಿಸಿ, ಫಲಪುಷ್ಟ, ಸ್ಮರಣಿಕೆಯನ್ನಿತ್ತು ಹಿರಿಯ ಅರ್ಚಕರಾದ ಗೋಪಾಲಕೃಷ್ಣ ಬಾರಿಕ್ಕಾಡು ಆಶೀರ್ವದಿಸಿದರು. ಶ್ರೀ ದೇವಳದ ಪ್ರಧಾನ ಅರ್ಚಕರಾದ ಗಣೇಶ್ ಮಲ್ಲಿಗೆಮಾಡು, ಅಧ್ಯಕ್ಷರಾದ ಬಾಲಕೃಷ್ಣ ಮಲ್ಲಿಗೆಮಾಡು, ಕಾರ್ಯದರ್ಶಿ ಹರೀಶ್ ಸಹಿಹಿತ್ಲು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಆಟೋಟ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಗಣ್ಯರು ಬಹುಮಾನ ವಿತರಿಸಿದರು.
ಶ್ರೇಯಾ ಮತ್ತು ಐಶ್ವರ್ಯ ಪ್ರಾರ್ಥನೆ ಹಾಡಿದರು. ಸಾಹಿತಿ ಚಂದ್ರಹಾಸ ಎಂ.ಬಿ.ಚಿತ್ತಾರಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಗಣೇಶ್ ಬಿ.ಮಲ್ಲಿಗೆಮಾಡು ವಂದಿಸಿದರು.




