ಮೌನ ನಾಮಜಪ ಆರನೇ ದಿನ ಯಶಸ್ವಿ
0
ಮಾರ್ಚ್ 11, 2019
ಮಂಜೇಶ್ವರ: ಪಾವೂರು ಶಿವಪುರದ ಶ್ರೀಮಹಾ ಮೃತ್ಯುಂಜಯೇಶ್ವರ ದೇವಸ್ಥಾನದಲ್ಲಿ ಮಾರ್ಚ್ 4 ದಿಂದ ಶ್ರೀಕ್ಷೇತ್ರದ ಸಾನ್ನಿಧ್ಯ ವೃದ್ದಿಗಾಗಿ ಯೋಗಾಚಾರ್ಯ ಪುಂಡರೀಕಾಕ್ಷ ಬೆಳ್ಳೂರು ಅವರ ನೇತೃತ್ವದಲ್ಲಿ 48 ದಿವಸಗಳ ಉದಯಾಸ್ತಮಾನ ಮೌನ ನಾಮಜಪ ಕಾರ್ಯಕ್ರಮದ ಅಂಗವಾಗಿ ಆರನೇ ದಿನವಾದ ಭಾನುವಾರ ಬೆಳಿಗ್ಗೆ ಗಣಪತಿ ಹವನದ ಬಳಿಕ ಪುಂಡರೀಕಾಕ್ಷರಿಂದ ಮೌನ ನಾಮ ಜಪ ನೂರಕ್ಕಿಂತ ಹೆಚ್ಚು ಬಾರಿ ನಡೆಯಿತು. ಭಕ್ತರಿಂದ ಸಾವಿರ ಸಂಖ್ಯೆಯಲ್ಲಿ ನಾಮ ಜಪ ನಡೆಯಿತು. ಬೆಳಿಗ್ಗೆ ಮುಂಬೈಯ ಶ್ರೀಕೃಷ್ಣ ಉಚ್ಚಿಲ್ ಕ್ಷೇತ್ರಕ್ಕೆ ಭೇಟಿ ನೀಡಿದರು.ಹೊಸಬೆಟ್ಟಿನ ಶ್ರೀರಾಧಾಕೃಷ್ಣ ಭಜನಾ ಮಂಡಳಿಯವರಿಂದ ಭಜನಾ ಸಂಕೀರ್ತನೆ ನಡೆಯಿತು. ಸಂಜೆ 6.30 ಕ್ಕೆ ಪುಂಡರೀಕಾಕ್ಷ ಯೋಗಾಚಾರ್ಯ ರಿಂದ ಸತ್ಸಂಗ ನಡೆಯಿತು ಈ ಸಂದರ್ಭದಲ್ಲಿ ರವೀಂದ್ರ ಶೆಟ್ಟಿ ಉಳಿದೊಟ್ಟು, ನ್ಯಾಯವಾದಿ. ಗಂಗಾಧರ ಕೊಂಡೆವೂರು, ಅನಂತ ಕೃಷ್ಣ ಯಾದವ್ ಮಂಗಳೂರು, ಸುಬ್ಬ ಗುರುಸ್ವಾಮಿ ಪಾವೂರು,ಗೋಪಾಲ ಶೆಟ್ಟಿ ಅರಿಬೈಲು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮತನಾಡಿದರು. ಕುಶಾಲಾಕ್ಷಿ ಕಾನದಕಟ್ಟ ಕಾರ್ಯಕ್ರಮ ನಿರ್ವಹಿಸಿದರು.




