ಅಡೂರು ಕ್ಷೇತ್ರದ ವಾರ್ಷಿಕ ಜಾತ್ರೆ ಇಂದಿನಿಂದ
0
ಮಾರ್ಚ್ 11, 2019
ಮುಳ್ಳೇರಿಯ : ಅಡೂರಿನ ಮಹಾಲಿಂಗೇಶ್ವರ ಮಹಾವಿಷ್ಣು ವಿನಾಯಕ ಕ್ಷೇತ್ರದ ವಾರ್ಷಿಕ ಜಾತ್ರೋತ್ಸವವು ಇಂದು(ಮಾ.12) ಧ್ವಜಾರೋಹಣಗೊಂಡು, ಮಾ.14ರಿಂದ ಮಾ.20ರ ತನಕ ವಿವಿಧ ಧಾರ್ಮಿಕ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಇಂದು ಬೆಳಿಗ್ಗೆ 10ಕ್ಕೆ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ ನಡೆಯಲಿದೆ. ಪ್ರತೀದಿನ ಮಧ್ಯಾಹ್ನ 12ರಿಂದ ಹಾಗೂ ಸಂಜೆ 6ರಿಂದ ವಿವಿಧ ತಂಡಗಳಿಂದ ಭಜನಾ ಕಾರ್ಯಕ್ರಮಗಳು ನಡೆಯಲಿದೆ. ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಮಾ.14ರಂದು ಸಂಜೆ 7ರಿಂದ ಕಲ್ಲಿಕೋಟೆ ನರ್ತನ ಕಲಾಲಯಂ ಸದಸ್ಯರಿಂದ 'ಜಠಾಯು' ಮಲಯಾಳ ನಾಟಕ, ಮಾ.15ರಂದು ಸಂಜೆ 6.30ರಿಂದ ಧರ್ಮಶಾಸ್ತಾ ಯಕ್ಷಗಾನ ಕಲಾ ಸಂಘದ ಮಕ್ಕಳಿಂದ, ಬಾಯಾರು ಸೂರ್ಯನಾರಾಯಣ ಪದಕಣ್ಣಾಯರ ಮಾರ್ಗದರ್ಶನದಲ್ಲಿ ಬೌಮಾಸುರ ವಧೆ ಯಕ್ಷಗಾನ ಬಯಲಾಟ, ರಾತ್ರಿ 8.00ರಿಂದ ನಾಟ್ಯನಿಲಯಂ ಬಾಲಕೃಷ್ಣ ಮಂಜೇಶ್ವರ ಅವರ ಶಿಷ್ಯರಿಂದ ನೃತ್ಯ ಸಮರ್ಪಣಂ ಜರಗಲಿದೆ.
ಮಾ.16ರಂದು ಸಂಜೆ 7ರಿಂದ ಬೆಂಗಳೂರಿನ ಸ್ವಾಮಿ ಸೂರ್ಯಪಾದ ಅವರಿಂದ ಭಜನ್ ಸಂಧ್ಯಾ, ರಾತ್ರಿ 9.30ರಿಂದ ಜಾನಪದ ಗೀತೆ ಹಾಗೂ ನೃತ್ಯ ಕಾರ್ಯಕ್ರಮ ಜರಗಲಿದೆ. ಮಾ.17ರಂದು ಮಧ್ಯಾಹ್ನ 12ರಿಂದ ಯಕ್ಷಕೂಟ, ಸಂಜೆ 6.30ರಿಂದ ಶಾಸ್ತ್ರೀಯ ನೃತ್ಯ ಕಾರ್ಯಕ್ರಮ ಜರಗಲಿದೆ. ರಾತ್ರಿ 11ರಿಂದ ಶ್ರೀಪಥ ಕನ್ನಡ ನಾಟಕ, ರಾತ್ರಿ 9.30ರಿಂದ ಭಕ್ತಿ ರಸಮಂಜರಿ ಮತ್ತು ರಾತ್ರಿ 10 ಗಂಟೆಗೆ ಬೆಡಿಸೇವೆ ನಡೆಯಲಿದೆ. ಮಾ.18ರಂದು ರಾತ್ರಿ 7ಕ್ಕೆ ಇಂದ್ರಜಾಲ ಪ್ರದರ್ಶನ, ರಾತ್ರಿ 11ರಿಂದ ಶಾರದಾ ಆಟ್ರ್ಸ್ ಮಂಗಳೂರು ಇವರಿಂದ ನಿತ್ಯೆಬನ್ನಗ ತುಳು ನಾಟಕ ಪ್ರದರ್ಶನಗೊಳ್ಳಲಿದೆ. ಮುಂಜಾನೆ 3 ಗಂಟೆಗೆ ಧ್ವಜಾವರೋಹಣ ನಡೆಯಲಿದೆ. ಮಾ.19ರಂದು ಬೆಳಗ್ಗೆ 8ರಿಂದ ಪೂಮಾಣಿ ಕಿನ್ನಿಮಾಣಿ ದೈವದ ನೇಮೋತ್ಸವ ಹಾಗೂ ಮಾ.20ರಂದು ಬೆಳಗ್ಗೆ 7ರಿಂದ ಚಾಮುಂಡಿ ದೈವ ನರ್ತನ, ಬೆಳಗ್ಗೆ 10ರಿಂದ ರಕ್ತೇಶ್ವರಿ ದೈವ ನರ್ತನ ಹಾಗೂ ಸಂಜೆ 5ರಿಂದ ವಿಷ್ಣುಮೂರ್ತಿ ದೈವ ನರ್ತನ ಸೇವೆ ನಡೆಯಲಿದೆ.




