HEALTH TIPS

ಕಡಲ್ಕೊರೆತ ನಿಯಂತ್ರಣಕ್ಕೆ ಕ್ರಮಬೇಕು: ಜಿಲ್ಲಾ ಅಭಿವೃದ್ಧಿ ಸಮಿತಿ ಸಭೆ

       
           ಕಾಸರಗೋಡು: ಜಿಲ್ಲೆಯಲ್ಲಿ ವಲಿಯಪರಂಬ ದ್ವೀಪ ಸಹಿತ ಕರಾವಳಿ ಪ್ರದೇಶಗಳಲ್ಲಿ ಕಡಲ್ಕೊರೆತ ತೀವ್ರವಾಗಿದ್ದು, ನಿಯಂತ್ರಣ ಕ್ರಮ ಆರಂಭಿಸುವಂತೆ ಜಿಲ್ಲಾ ಅಭಿವೃದ್ಧಿಸಮಿತಿ ಆಗ್ರಹಿಸಿದೆ.
      ಜಿಲ್ಲಾಧಿಕಾರಿ ಕಚೇರಿ ಕಿರು ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಹೆಚ್ಚುವರಿ ದಂಡನಾಧಿಕಾರಿ ಎನ್.ದೇವಿದಾಸ್ ಅಧ್ಯಕ್ಷತೆ ವಹಿಸಿದ್ದರು. 
        ತಡೆಗೋಡೆ ನಿರ್ಮಾಣಕ್ಕೆ ನೀರಾವರಿ ಇಲಾಖೆ ಕ್ರಮಕೈಗೊಳ್ಳಬೇಕು ಎಂಬ ಆಗ್ರಹಿಸಲಾಯಿತು. 89.20 ಕಿಮೀ ಉದ್ದದಲ್ಲಿಜಿಲ್ಲೆಯ ಕಡಲಕಿನಾರೆಯಿದೆ. ಇದರಲ್ಲಿ 64.60 ಕಿಮೀ ನಷ್ಟ ಸಂರಕ್ಷಣೆ ಚಟುವಟಿಕೆಗಳ ಅಗತ್ಯವಿದೆ. ಸಂರಕ್ಷಣೆಗೆ ಬದಲಿ ಸಾಧ್ಯತೆಗಳ ಸಾಧ್ಯತೆಗಳನ್ನೂ ಅಧ್ಯಯನನಡೆಸಿ ಕ್ರಮ ಕೈಗೊಳ್ಳುವಂತೆ ಕ್ರಮಕೈಗೊಳ್ಳಬೇಕು. ಕಡಲ್ಕೊರೆತ ಜನಜೀವನಕ್ಕೆ ತಡೆಯಾಗದಂತೆ ಜಾಗ್ರತೆ ಪಾಲಿಸಬೇಕು ಎಂದು ಸಭೆ ತಿಳಿಸಿದೆ.
     ಶಾಸಕರಾದ ಎನ್.ಎ.ನೆಲ್ಲಿಕುನ್ನು, ಎಂ.ರಾಜಗೋಪಾಲ್, ಕೆ.ಕುಂ??ರಾಮನ್, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶಾಂತಮ್ಮಾ ಫಿಲಿಪ್, ಸಂಸದರಪ್ರತಿನಿಧಿ ಎ.ಗೋವಿಂದನ್ ನಾಯರ್, ನಗರಸಭೆ ಅಧ್ಯಕ್ಷರಾದ ವಿ.ವಿ.ರಮೇಶನ್,  ಪ್ರೊ.ಕೆ.ಪಿ.ಜಯರಾಜನ್, ಗ್ರಾಮಪಂಚಾಯತ್ ಅಧ್ಯಕ್ಷರ ಅಸೋಸಿಯೇಶನ್ ಅಧ್ಯಕ್ಷ ಎ.ಎ.ಜಲೀಲ್,ಜಿಲ್ಲಾ ಯೋಜನಾಧಿಕಾರಿ ಎಸ್.ಸತ್ಯಪ್ರಕಾಶ್ ಮೊದಲಾದವರು ಉಪಸ್ಥಿತರಿದ್ದರು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries