ಬದಿಯಡ್ಕ : ಸಹಕಾರ ಭಾರತಿಯ ಕಾಸರಗೋಡು ತಾಲೂಕು ಸಮಿತಿಯ ಆಶ್ರಯದಲ್ಲಿ ತಾಲೂಕಿನ ಎಲ್ಲಾ ಸಹಕಾರಿ ಸಂಘಗಳ ನಿರ್ದೇಶಕರ, ಸಹಕಾರಿ ನೌಕರರ ಮತ್ತು ಸಂಘಟನೆ ಕಾರ್ಯಕರ್ತರ ಸಮ್ಮೇಳನವು ಆ. 11ರಂದು ಭಾನುವಾರ ಅಪರಾಹ್ನ 2 ಗಂಟೆಗೆ ಬದಿಯಡ್ಕ ಸಂಸ್ಕøತಿ ಭವನದಲ್ಲಿ ನಡೆಯಲಿದೆ.
ಕಾಸರಗೋಡು ಸಹಕಾರ ಭಾರತಿ ಜಿಲ್ಲಾ ಸಮಿತಿಯ ಅಧ್ಯಕ್ಷ ಗಣಪತಿ ಕೋಟೆಕಣಿ ಉದ್ಘಾಟಿಸುವರು. ಸ್ವಾಗತ ಸಮಿತಿಯ ತಾಲೂಕು ಸಮ್ಮೇಳನ ಅಧ್ಯಕ್ಷ ಜಯದೇವ ಖಂಡಿಗೆ ಅಧ್ಯಕ್ಷತೆ ವಹಿಸಲಿರುವರು. ಕಾಸರಗೋಡು ಜಿಲ್ಲಾ ಸಮಿತಿಯ ಸಹಕಾರ ಭಾರತಿ ಸಂಘಟನಾ ಕಾರ್ಯದರ್ಶಿ ಶಂಕರನಾರಾಯಣ ಕಿದೂರು, ಕಾಸರಗೋಡು ಜಿಲ್ಲಾ ಸಮಿತಿಯ ಸಹಕಾರ ಭಾರತಿ ಪ್ರಧಾನ ಕಾರ್ಯದರ್ಶಿ ಗಣೇಶ ಪಾರೆಕಟ್ಟೆ ಉಪಸ್ಥಿತರಿರುವರು. ಕೇರಳ ಪ್ರಾಂತ್ಯ ಸಹಕಾರ ಭಾರತಿ ಸಮಿತಿ ಸದಸ್ಯ ಐತ್ತಪ್ಪ ಮವ್ವಾರು "ಜವಬ್ದಾರಿ ಮತ್ತು ಕರ್ತವ್ಯಗಳು" ಹಾಗೂ ಕಾಸರಗೋಡು ಜಿಲ್ಲಾ ಸಹಕಾರ ಭಾರತಿ ಎಂಪ್ಲೋಯಿಸ್ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಕೋಡೋತ್ ಅವರು "ಆಡಳಿತ ಮತ್ತು ನೌಕರರು" ಎಂಬ ವಿಷಯ ಬಗ್ಗೆ ತರಗತಿ ನಡೆಸಿಕೊಡಲಿರುವರು. ಸಹಕಾರ ಭಾರತಿ ಕಾಸರಗೋಡು ತಾಲೂಕು ಸಮಿತಿ ಅಧ್ಯಕ್ಷ ಪದ್ಮರಾಜ ಪಟ್ಟಾಜೆ, ಕಾರ್ಯದರ್ಶಿ ಹರಿಪ್ರಸಾದ್ ಪಾಲ್ಗೊಳ್ಳಲಿರುವರು.

