ಬದಿಯಡ್ಕ: ಅಗಲ್ಪಾಡಿ ಶ್ರೀ ಗೋಪಾಲಕೃಷ್ಣ ಭಜನ ಮಂದಿರದಲ್ಲಿ ರಾಮಾಯಣ ಮಾಸಾಚರಣೆ ಕಾರ್ಯಕ್ರಮವು ಇಂದಿನಿಂದ (ಆ.9ರಿಂದ) ಆ.12ರ ತನಕ ಪ್ರತೀ ದಿನ ಸಂಜೆ 7.30ರಿಂದ 8.30ರ ತನಕ ಅಗಲ್ಪಾಡಿ ಜಯನಗರ ಪಾಂಚಜನ್ಯ ಸಭಾಭವನದಲ್ಲಿ ಜರಗಲಿರುವುದು.
ನಾಮಜಪ, ಸತ್ಸಂಗ, ರಾಮಾಯಣ ರಸಪ್ರಶ್ನೆ, ಭಜನಾ ಕಾರ್ಯಕ್ರಮ ಈ ಸಂಧರ್ಭದಲ್ಲಿ ನಡೆಯಲಿರುವುದು. ಆ.9ರಂದು ಸಂಜೆ ಅಗಲ್ಪಾಡಿ ಶಾಲೆಯ ನಿವೃತ್ತ ಅಧ್ಯಾಪಕ ರಾಮಚಂದ್ರ ಭಟ್ ಉಪ್ಪಂಗಳ ದೀಪಪ್ರಜ್ವಲನೆ, ಕರ್ನಾಟಕ ಜಾನಪದ ಪರಿಷತ್ತು ಕೇರಳ ಗಡಿನಾಡ ಘಟಕದ ಗೌರವ ಸಲಹೆಗಾರರಾದ ಪ್ರೊ.ಎ. ಶ್ರೀನಾಥ್ ಅವರಿಂದ ಸತ್ಸಂಗ, ಆ.10ರಂದು ಅಗಲ್ಪಾಡಿ ಗೋಪಾಲಕೃಷ್ಣ ಭಜನಾ ಮಂದಿರದ ಅಧ್ಯಕ್ಷ ಬಾಬು ಮಾಸ್ತರ್ ಅಗಲ್ಪಾಡಿ ದೀಪ ಪ್ರಜ್ವಲನೆ, ಅಗಲ್ಪಾಡಿ ಶಾಲೆಯ ನಿವೃತ್ತ ಅಧ್ಯಾಪಕ ಶ್ರೀಧರ ಭಟ್ ಕುದಿಂಗಿಲ ಸತ್ಸಂಗ ನಡೆಸಲಿರುವರು. ಆ.11ರಂದು ಅಗಲ್ಪಾಡಿ ಯಾದವ ಸೇವಾಸಂಘದ ಅಧ್ಯಕ್ಷ ಕುಂಞÂರಾಮ (ನಾರಾಯಣ) ಮಣಿಯಾಣಿ ಮಾರ್ಪನಡ್ಕ ಅವರಿಂದ ದೀಪಪ್ರಜ್ವಲನೆ, ಗೋಪಾಲಕೃಷ್ಣ ಭಜನಾ ಮಂದಿರದ ಪ್ರ.ಕಾರ್ಯದರ್ಶಿ ರಮೇಶ ಕೃಷ್ಣ ಪದ್ಮಾರು ನಿರ್ವಹಣೆಯಲ್ಲಿ ಸಾರ್ವಜನಿಕರಿಗೆ ಹಾಗೂ ಮಕ್ಕಳಿಗೆ ಸಂಪೂರ್ಣ ರಾಮಾಯಣ ರಸಪ್ರಶ್ನೆ, ಆ.12ರಂದು ಸಾಯಂ 6.30ರಿಂದ ಭಜನೆ ನಡೆಯಲಿದೆ. ಪ್ರತಿದಿನ ಸತ್ಸಂಗದಲ್ಲಿ ಮವ್ವಾರು ಸೀತಾರಾಮ ಭಟ್ ಮುಂಗಿಲ ನಾಪಜಪವನ್ನು ನಡೆಸಿಕೊಡುವರು.

