ಬದಿಯಡ್ಕ: ತನ್ನ ಜೀವನದ ಸಂತಸ ಕ್ಷಣಗಳನ್ನು ಅನುಭವಿಸಿ ಇಹಲೋಕವನ್ನು ತ್ಯಜಿಸಿದ ಮಹಾನ್ ನಾಯಕಿ, ಮಹಿಳೆಯರಿಗೆ ಆದರ್ಶಪ್ರಾಯರಾಗಿ ಸುಶ್ಮಾ ಸ್ವರಾಜ್ ಅವರು ಅಮರರಾಗಿದ್ದಾರೆ. ಅವರು ತನ್ನ ಜೀವನದುದ್ದಕ್ಕೂ ದೇಶದ ಜನತೆಯ ಬಗ್ಗೆ ಚಿಂತಿಸಿದ ವೀರ ಮಹಿಳೆ ಎಂದು ಬಿಜೆಪಿ ಕಾಸರಗೋಡು ಮಂಡಲ ಕಾರ್ಯದರ್ಶಿ ಹರೀಶ್ ನಾರಂಪಾಡಿ ಹೇಳಿದರು.
ಅಗಲಿದ ಬಿಜೆಪಿ ಹಿರಿಯ ನೇತಾರೆ ಸುಶ್ಮಾ ಸ್ವರಾಜ್ ಅವರಿಗೆ ಬಿಜೆಪಿ ವತಿಯಿಂದ ಬದಿಯಡ್ಕ ಪೇಟೆಯಲ್ಲಿ ನಡೆದ ಶ್ರದ್ಧಾಂಜಲಿ ಮೆರವಣಿಗೆ, ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು. ವಿದೇಶ ಮಂತ್ರಿಯಾಗಿದ್ದಾಗ ಭಾರತೀಯರ ರಕ್ಷಣೆಗಾಗಿ ಅವಿರತವಾಗಿ ಶ್ರಮಿಸಿದ್ದಾರೆ. ಪ್ರತಿಯೊಬ್ಬ ಮಹಿಳೆಯರಿಗೂ ಅವರು ಆದರ್ಶಪ್ರಾಯರಾಗಿ ಜೀವಿಸಿದ್ದಾರೆ. 370ನೇ ವಿಧಿಯನ್ನು ರದ್ದು ಮಾಡಿದ ಕೇಂದ್ರ ಸರಕಾರದ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿ ತನ್ನ ಸಂತಸದ ಕ್ಷಣ ಇದು ಎಂದು ಅವರು ಕೊನೆಯ ಕ್ಷಣದಲ್ಲಿ ಹೇಳಿದ್ದಾರೆ ಎಂದರು. ಪಕ್ಷದ ನೇತಾರರಾದ ಬಾಲಕೃಷ್ಣ ಶೆಟ್ಟಿ ಕಡಾರು, ವಿಶ್ವನಾಥ ಪ್ರಭು ಕರಿಂಬಿಲ, ಕೃಷ್ಣ ಮಣಿಯಾಣಿ ಮೊಳೆಯಾರು, ನಾರಾಯಣ ಭಟ್ ಮೈರ್ಕಳ, ಅವಿನಾಶ್ ರೈ, ಈಶ್ವರ ಮಾಸ್ತರ್ ಪೆರಡಾಲ, ನ್ಯಾಯವಾದಿ ಗಣೇಶ್ ಬಿ ಹಾಗೂ ಪಕ್ಷದ ಕಾರ್ಯಕರ್ತರು ಶ್ರದ್ಧಾಂಜಲಿ ಸಮರ್ಪಿಸಿದರು. ಬದಿಯಡ್ಕ ಗಣೇಶ ಮಂದಿರದಿಂದ ಆರಂಭವಾದ ಮೆರವಣಿಗೆಯು ಬಸ್ ನಿಲ್ದಾಣದಲ್ಲಿ ಸಮಾಪ್ತಿಯಾಯಿತು.

