ಮುಳ್ಳೇರಿಯ: ಭಾಷಾ ಅಲ್ಪಸಂಖ್ಯಾತ ಪ್ರದೇಶ ಕಾಸರಗೋಡಿನಲ್ಲಿ ಒಂದನೇ ತರಗತಿಯಿಂದ ಹತ್ತನೇ ತರಗತಿ ತನಕ ಕನ್ನಡ ಮಾಧ್ಯಮದಲ್ಲಿ ಕಲಿಯುವ ಕನ್ನಡಿಗರಿಗೆ ಕೇರಳ - ಕರ್ನಾಟಕ ರಾಜ್ಯಗಳಲ್ಲಿ ಉದ್ಯೋಗ ದೊರಕುವ ಅವಕಾಶವಿದೆಯೆಂದು ಕನ್ನಡ ಹೋರಾಟ ಸಮಿತಿಯ ಪ್ರಧಾನ ಕಾರ್ಯದರ್ಶಿ ಭಾಸ್ಕರ ಕಾಸರಗೋಡು ತಿಳಿಸಿದರು.
ಕನ್ನಡ ಹೋರಾಟ ಸಮಿತಿಯ ಕುತ್ತಿಕೋಲು ಪ್ರಾದೇಶಿಕ ಸಮಿತಿಯ ಸಭೆಯಲ್ಲಿ ಅವರು ಮಾತನಾಡಿ ಗೊಂದಲಗಳ ನಿವಾರಣೆ ಮಾಡಿದರು.
ಮಲೆನಾಡು ಬಂದಡ್ಕ ಪ್ರದೇಶದಲ್ಲಿ ಕನ್ನಡಿಗರ ಒಗ್ಗಟ್ಟಿನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಬಂದಡ್ಕ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಮಯೂರ ಮಂಟಪದಲ್ಲಿ ಜರಗಿದ ಕನ್ನಡಿಗರ ಸಭೆಯಲ್ಲಿ ಹೋರಾಟ ಸಮಿತಿಯ ಮುಂದಾಳು ನಿವೃತ್ತ ಮುಖ್ಯೋಪಾಧ್ಯಾಯ ಸತೀಶ್ ಕೂಡ್ಲು, ದಿನೇಶ್ ಚೆರುಗೋಳಿ, ಕನ್ನಡ ಸಂಘದ ಅಧ್ಯಕ್ಷ ಪುರುಷೋತ್ತಮ ಬೊಡ್ಡನಕೊಚ್ಚಿ, ಭೋಜಪ್ಪ ಗೌಡ, ಪಂಚಾಯತಿ ಸದಸ್ಯೆ ಧರ್ಮಾವತಿ ಮೊದಲಾದವರು ಅಭಿಪ್ರಾಯ ಮಂಡಿಸಿದರು.
ಪೂವಪ್ಪ ಕೃಷ್ಣ, ಚರಣ್ ರಾಜ್, ಸುಭಾಶ್ಚಂದ್ರ, ಸರಿತ, ಪ್ರವೀಣ ಮೊದಲಾದವರು ವಿವಿಧ ಸಮಸ್ಯೆಗಳ ಬಗ್ಗೆ ಸಭೆಯಲ್ಲಿ ಚರ್ಚಿಸಿದರು. ಕುತ್ತಿಕೋಲ್ ಕನ್ನಡ ಹೋರಾಟ ಸಮಿತಿಯ ಅಧ್ಯಕ್ಷರಾಗಿ ಕೊರಗ ನಾಯಕ್ ಅವರು ಆಯ್ಕೆಯಾದರು. ಉಪಾಧ್ಯಕ್ಷರಾಗಿ ಬಿ.ಚರಣ್ ಕುಮಾರ್, ಪ್ರಧಾನ ಕಾರ್ಯದರ್ಶಿಯಾಗಿ ಪ್ರವೀಣ ಇಳಂತಿಲ, ಜೊತೆ ಕಾರ್ಯದರ್ಶಿಗಳಾಗಿ ಜಯ ಕುಮಾರ್ ಕಟ್ಟೆತ್ತೋಡಿ, ಸರಿತಾ ಬಲ್ಲಾರಮೂಲೆ, ನಳಿನಿ ಮಕ್ಕಟ್ಟೆ, ಕಾವ್ಯ ಪಿ.ಎಂ. ಪಾಲಾರು, ವಿದ್ಯಾ ಚಾಮಕೊಚ್ಚಿ, ಕೋಶಾಧಿಕಾರಿಯಾಗಿ ವೆಂಕಟರಮಣ ಕೊೈಂಗಾಜೆ ಹಾಗು 25 ಮಂದಿಯ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು. ಪುರುಷೋತ್ತಮ ಬೊಡ್ಡನಕೊಚ್ಚಿ ಅಧ್ಯಕ್ಷತೆ ವಹಿಸಿದರು. ಪ್ರವೀಣ್ ಇಳಂತಿಲ ವಂದಿಸಿದರು.


