ಪೆರ್ಲ: ಬಜಕೂಡ್ಲು ಅಮೃತಧಾರಾ ಗೋಶಾಲೆ, ಗೋಲೋಕದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ವಿವಿಧ ಕಾರ್ಯಕ್ರಮಗಳೊಂದಿಗೆ ಶುಕ್ರವಾರಜರಗಿತು.
ಈ ಪ್ರಯುಕ್ತ ಭಜನೆ, ಗೋಪೂಜೆ, ಗೋಪಾಲಕೃಷ್ಣ ಪೂಜೆ, ದುರ್ಗಾ ಪೂಜೆ, ಸಾಮೂಹಿಕ ವಿಷ್ಣು ಸಹಸ್ರನಾಮ ಹಾಗು ಲಲಿತಾ ಸಹಸ್ರನಾಮ ಪಾರಾಯಣ ಕೇಪು ವಲಯ ವೈದಿಕ ಪ್ರಮುಖ ವೇ.ಮೂ. ಮಹೇಶ ಉಪಾಧ್ಯಾಯ ಅವರ ನೇತೃತ್ವದಲ್ಲಿ ಜರಗಿತು.
ರಾತ್ರಿ ಶ್ರೀಕೃಷ್ಣ ಜನ್ಮಾಷ್ಟಮಿ ಪೂಜೆ, ಕೃಷ್ಣ ಜನ್ಮೋತ್ಸವ, ಮಧ್ಯರಾತ್ರಿ ಅಘ್ರ್ಯ ಪ್ರದಾನ, ಜೋಗುಳ ಗೀತೆಯೊಂದಿಗೆ ಶ್ರೀ ದೇವರಿಗೆ ತೊಟ್ಟಿಲು ಮಹೋತ್ಸವ, ಶಯನೋತ್ಸವ ವೈಭವದಿಂದ ಜರಗಿತು.
ಗೋ ಶಾಲೆ ಪದಾಧಿಕಾರಿಗಳು, ಕಾರ್ಯಕರ್ತರು, ಗೋ ಭಕ್ತರು, ಎಣ್ಮಕಜೆ ಹವ್ಯಕ ವಲಯದ ಶ್ರೀಗುರು ಭಕ್ತರು ಈ ಪುಣ್ಯ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.


