ಪೆರ್ಲ: 2019 ರ ಮೈಸೂರು ದಸರಾ ಪಂಚ ಕವಿಗೋಷ್ಠಿಗೆ ಗಡಿನಾಡು ಕಾಸರಗೋಡು ಜಿಲ್ಲೆಯಿಂದ ಪೆರ್ಲದ ಅಕ್ಷತಾ ರಾಜ್ ಅವರ ಕರಿ ಪತ್ತಿ ತಂಚಿ ತುಳು ಕವನ ಆಯ್ಕೆಯಾಗಿದೆ. ಪೆರ್ಲ ಕಯ್ಯಂಕೂಡ್ಲು ನಿವಾಸಿ ಗಣರಾಜ್ ಭಟ್ ಅವರ ಪತ್ನಿಯಾಗಿದ್ದು ಬೊಳ್ಳಿ ತುಳು ಕಾದಂಬರಿಗಾಗಿ 2019 ರ ಎಸ್.ಯು.ಪಣಿಯಾಡಿ ತುಳು ಕಾದಂಬರಿ ಪ್ರಶಸ್ತಿ ಪುರಸ್ಕøತೆಯಾಗಿದ್ದಾರೆ. ಸಂಚಿಯೊಳಗಿನ ಸಂಜೆಗಳು ಕನ್ನಡ ಪುಸ್ತಕ ಪ್ರಾಧಿಕಾರ ಹಸ್ತಪ್ರತಿ ಪುರಸ್ಕøತ ಕನ್ನಡ ಕವನ ಸಂಕಲನ. ಅ. 6 ರಂದು ಮೈಸೂರಿನ ಜಗನ್ಮೋಹನ ಅರಮನೆಯಲ್ಲಿ ಖ್ಯಾತ ಕವಿಗಳಾದ ಡಾ.ಹೆಚ್.ಎಲ್.ಪುಷ್ಪ ಅವರ ಅಧ್ಯಕ್ಷತೆಯಲ್ಲಿ ಗೋಷ್ಠಿ ನಡೆಯಲಿದ್ದು, ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಡಾ.ಮನು ಬಳಿಗಾರ್ ಉದ್ಘಾಟಿಸುವರು. ಗೀತ ರಚನೆಕಾರರಾದ ಡಾ.ನಾಗೇಂದ್ರ ಪ್ರಸಾದ್ ಮುಖ್ಯ ಅತಿಥಿಗಳಾಗಿದ್ದು ರಾಜ್ಯದ ಎಲ್ಲಾ ಜಿಲ್ಲೆಯ ಆಯ್ದ ಕವಿಗಳ ಕವಿಗೋಷ್ಠಿ ನಡೆಯಲಿದೆ.
ಪ್ರತಿಷ್ಠಿತ ಮೈಸೂರು ದಸರಾ ಪಂಚ ಕವಿಗೋಷ್ಠಿ-2019 ಕ್ಕೆ ಕಾಸರಗೋಡು ಜಿಲ್ಲೆಯಿಂದ ತುಳು ಭಾಷೆಯ ಪ್ರತಿನಿಧಿಯಾಗಿ ಅಕ್ಷತಾರಾಜ್ ಪೆರ್ಲ ಆಯ್ಕೆ
0
ಸೆಪ್ಟೆಂಬರ್ 29, 2019