ಬದಿಯಡ್ಕ: ಕೇರಳ ಮರಾಟಿ ಸಂರಕ್ಷಣಾ ಸಮಿತಿ ವತಿಯಿಂದ ಮರಾಟಿ ದಿನಾಚರಣೆಯು ಬದಿಯಡ್ಕ ಗುರುಸದನದಲ್ಲಿ ಗುರುವಾರ ನಡೆಯಿತು.
ಕೇರಳ ಮರಾಟಿ ಸಂರಕ್ಷಣಾ ಸಮಿತಿಯ ಮಾಜಿ ಅಧ್ಯಕ್ಷ ಕೃಷ್ಣ ನಾಯ್ಕ ಪೆಲ್ತಾಜೆ ಧ್ವಜಾರೋಹಣಗೈದು ಮಾತನಾಡಿ,ನಮ್ಮ ಸಂಸ್ಕøತಿಯ ಭವಿಷ್ಯದ ರೂವಾರಿಗಳಾದ ಯುವ ಜನರು ಹಾಗೂ ಮಕ್ಕಳನ್ನು ಸುಸಂಸ್ಕøತರನ್ನಾಗಿ ಉತ್ತಮ ವಿಚಾರಧಾರೆಗಳೊಂದಿಗೆ ಬೆಳೆಸೋಣ. ಸಮುದಾಯದ ಸಂರಕ್ಷಣೆಯ ನಿಟ್ಟಿನಲ್ಲಿ ಏಕತೆಯಿಂದ ಪರಸ್ಪರ ಸದೃಢ ಉದ್ದೇಶದೊಂದಿಗೆ ಮುಂದುವರಿಯೋಣ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ- ಕೇರಳ ಟ್ರೈಬಲ್ ಮರಾಟಿ ಫೆಡರೇಶನ್‍ನ ಕಾರ್ಯದರ್ಶಿ ವಿಶ್ವನಾಥ ನಾಯ್ಕ ಬಿ.ಎಸ್., ಪ್ರಧಾನ ಸಂಚಾಲಕ ಶ್ಯಾಮ ಪ್ರಸಾದ್ ಮಾನ್ಯ, ಕರ್ನಾಟಕ-ಕೇರಳ ಟ್ರೈಬಲ್ ಮರಾಟಿ ಫೆಡರೇಶನ್‍ನ ಅಧ್ಯಕ್ಷ ಟಿ. ಸುಬ್ರಾಯ ನಾಯ್ಕ, ಸಿನಿಮಾ ತಾರೆ ಆಶಾ ಅಜಯ್, ರಾಧಾಕೃಷ್ಣ ಮಾಸ್ತರ್ ಮುಂತಾದವರು ಉಪಸ್ಥಿತರಿದ್ದರು.


